ಸುಳ್ಯ: ಪ್ರತಿ ಗ್ರಾಮದ ಅಭಿವೃದ್ಧಿಗೆ ಸಹಕಾರ ಸಂಘಗಳು ಪೂರಕ. ಆದುದರಿಂದ ಸಹಕಾರ ಸಂಸ್ಥೆಗಳು ನಮ್ಮ ಸಂಸ್ಥೆ ಎಂಬ ಪ್ರೀತಿ ಪ್ರತಿಯೊಬ್ಬರಲ್ಲಿಯೂ ಇರಬೇಕು ಎಂದು ಶಾಸಕಿ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ.ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪೇರಾಲು – ಅಂಬ್ರೋಟಿ ನವೀಕೃತ ಶಾಖೆಯ ಹಾಗೂ
ಮಲ್ಟಿ ಸರ್ವಿಸ್ ಸೆಂಟರ್ ಉದ್ಘಾಟಿಸಿ, ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಸ್ಥೆಗಳು
ರೈತರಿಗಾಗಿ ಹುಟ್ಟಿಕೊಂಡ, ಗ್ರಾಮದ ಉದ್ದಾರಕ್ಕಾಗಿ ಇರುವ ಸಂಸ್ಥೆ. ಆದುದರಿಂದ ಸಹಕಾರ ಸಂಸ್ಥೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು ಎಂದು ಅವರು ಹೇಳಿದರು.
ಗೋದಾಮು ಕಟ್ಟಡವನ್ನು ಉದ್ಘಾಟಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು ಮಾತನಾಡಿ
ಊರ ಜನರ ಅರ್ಥಿಕ ಸದೃಢತೆಗಾಗಿ ಸಹಕಾರ ಸಂಘಗಳು ಕೆಲಸ ಮಾಡುತ್ತದೆ. ಸಹಕಾರ ಸಂಘಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಶಕ್ತಿ ನೀಡಬೇಕು ಎಂದು ಹೇಳಿದರು.

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶಲ ಉದ್ದಂತಡ್ಕ, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ, ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಪ್ರಭಾಕರ ನಾಯಕ್, ಮಂಡೆಕೋಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಪಾಂಡುರಂಗ ರಾವ್ ಪುತ್ಯ, ಮಂಡೆಕೋಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾನಂದ ಮಾವಜಿ, ಹಾಗೂ ತಾಂತ್ರಿಕ ಸಲಹೆಗಾರರಾದ ಶ್ರೀಪಾದ ಕನ್ಸಲ್ಟೆನ್ಸಿಯ ಮಾಲಕರಾದ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷರಾದ ಜಲಜಾ ದೇವರಗುಂಡ, ನಿರ್ದೇಶಕರಗಳಾದ ಈಶ್ವರ ಚಂದ್ರ ಕೆ. ಆರ್.ಚಂದ್ರಜಿತ್ ಮಾವಂಜಿ, ಪದ್ಮನಾಭ ಚೌಟಾಜೆ, ಭಾರತಿ ಉಗ್ರಾಣಿಮನೆ, ಮೋನಪ್ಪ ನಾಯ್ಕ್ ಬೇಂಗತ್ತಮಲೆ, ಸುರೇಶ್ ಕಣೆಮರಡ್ಕ, ಭಾಸ್ಕರ್ ಮಿತ್ತಪೇರಾಲು, ಸರಸ್ವತಿ ಕಣೆಮರಡ್ಕ, ರವಿ ಚೇರದಮೂಲೆ, ಸುನಿಲ್ ಪಾತಿಕಲ್ಲು ಹಾಗೂ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಪುತ್ಯ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಶಶಿಕುಮಾರ್ ರೈ ಬಾಲ್ಯೋಟ್ಟು, ಶ್ಯಾಮ್ ಪ್ರಸಾದ್ ಅಡ್ಡಂತ್ತಡ್ಕ, ಸಂಧ್ಯಾ ಮಂಡೆಕೋಲು ಅವರನ್ನು ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕರಾದ ಪದ್ಮನಾಭ ಚೌಟಾಜೆ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ ವರದಿ ವಾಚಿಸಿದರು. ನಿರ್ದೇಶಕರಾದ ಚಂದ್ರಜಿತ್ ಮಾವಂಜಿ ವಂದಿಸಿದರು. ನಿರ್ದೇಶಕರಾದ ಸುರೇಶ್ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.

ಈ ನವೀಕೃತ ಶಾಖೆಯಲ್ಲಿ ಪೇರಾಲು – ಅಂಬ್ರೋಟಿ ಭಾಗದ ಸದಸ್ಯರಿಗೆ ಮುಖ್ಯ ಕಚೇರಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು ಎಂದು ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ತಿಳಿಸಿದ್ದಾರೆ.











