ಸುಳ್ಯ:ಪೇರಾಲು ಶ್ರೀ ಬಜಪ್ಪಿಲ ಇರುವೆರ್ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು.
ಎರಡನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಬಜಪ್ಪಿಲದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ ವಹಿಸಿದ್ದರು.ಪೇರಾಲು ಶ್ರೀ ಬಜಪ್ಪಿಲ ಕ್ಷೇತ್ರದ
ಅನುವಂಶಿಕ ಆಡಳಿತ ಮೊಕೇಸರರಾದ ಹೇಮಂತ್ಕುಮಾರ್ ಗೌಡರಮನೆ ಉಪಸ್ಥಿತರಿದ್ದರು.ಮುಖ್ಯ ಅತಿಥಿಗಳಾಗಿ ಅಜ್ಜಾವರ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಮೊಕ್ತೇಸರ ಮುದ್ದಪ್ಪ ಗೌಡ ಕುಡೆಂಬಿ ಕರ್ಲಪ್ಪಾಡಿ, ಅಜ್ಜಾವರ ಶ್ರೀ ಮಹಿಷಮರ್ಧಿನೀ ದೇವಸ್ಥಾನದ ಧರ್ಮದರ್ಶಿ ಬಯಂಬು ಭಾಸ್ಕರ ರಾವ್, ಅಂಬ್ರೋಟಿ ಹದಿನಾರು ಊರ ಗೌಡ ಲಕ್ಷ್ಮಣ ಗೌಡ ಕುಕ್ಕೇಟಿ,ಅತ್ಯಾಡಿ ಶ್ರೀ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲೋಕಯ್ಯ ಮಾಸ್ತರ್, ನಾರಾಲು
ಶ್ರೀ ಉಳ್ಳಾಕುಲು ಚಾವಡಿಯ ಶಾಂತಪ್ಪ ಗೌಡ ನಾರಾಲು,
ಮುಳ್ಯ ಹತ್ತೊಕ್ಕುಲು ಮುಖ್ಯಸ್ಥ ಹೊನ್ನಪ್ಪ ಗೌಡ ದೊಡ್ಡಮನೆ, ಕುಕ್ಕಂದೂರು ಶ್ರೀ ಕಿನ್ನಿಮಾನಿ ಪೂಮಾನಿ ದೈವಸ್ಥಾನದ ಮೊಕ್ತೇಸರ ಎನ್. ಎಸ್. ಬಾಲಕೃಷ್ಣ ಗೌಡ ನಡುಬೆಟ್ಟು, ಸುಳ್ಯ ಪನ್ನೆಬೀಡು ಶ್ರೀ ಭಗವತೀ ಕ್ಷೇತ್ರದ ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ, ಸುಳ್ಯ ಶ್ರೀ ಕಲ್ಕುಡ ದೈವಸ್ಥಾನದ ಅಧ್ಯಕ್ಷ ಉಮೇಶ್ ಪಿ. ಕೆ, ಶ್ರೀ ಕ್ಷೇತ್ರ ಬಜಪ್ಪಿಲದ ಆಡಳಿತ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಬಾಳೆಕೋಡಿ ಭಾಗವಹಿಸಿದ್ದರು.
ಶ್ರೀ ಕ್ಷೇತ್ರ ಬಜಪ್ಪಿಲದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಹರಿ ಕುಕ್ಕುಡೇಲು, ಕೋಶಾಧಿಕಾರಿ ತೀರ್ಥೇಶ್ ಬಲಂದೋಟಿ, ಸಂಚಾಲಕರಾದ ಜಯರಾಮ ಗೌಡರಮನೆ, ಕೋಶಾಧಿಕಾರಿ ಮೇದಪ್ಪ ಗೌಡ ಪೇರಾಲುಮೂಲೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ಮಂಜುನಾಥ ಪಿ.ಪೇರಾಲು, ದಾಮೋದರ ಮಿತ್ತಪೇರಾಲು, ರಾಜಣ್ಣ ಪೇರಾಲುಮೂಲೆ, ದಿನೇಶ್ ಗಬ್ಬಲಡ್ಕ, ಅರ್ಚಕರಾದ ದಿನೇಶ್ ರೈ ಪೇರಾಲು-ದರ್ಖಾಸು ಉಪಸ್ಥಿತರಿದ್ದರು. ಬಳಿಕ ರಾತ್ರಿ ತುಳು ಹಾಸ್ಯಮಯ ನಾಟಕ ಅಮ್ಮೆರ್ ಪ್ರದರ್ಶನಗೊಂಡಿತು.