ಪೆರಾಜೆ:ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ
ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ಉಪಾಧ್ಯಕ್ಷರಾಗಿ ಅಶೋಕ್ ಪೆರುಮುಂಡ ಆಯ್ಕೆಯಾಗಿದ್ದಾರೆ.ನಾಗೇಶ್ ಕುಂದಲ್ಪಾಡಿ ಹೆಸರನ್ನು ಕಿರಣ್ ಬಂಗಾರಕೋಡಿ ಸೂಚಿಸಿ, ಜಯರಾಮ ನಿಡ್ಯಮಲೆ ಅನುಮೋದಿಸಿದರು.
ಅಶೋಕ ಪೆರುಮುಂಡರವರ ಹೆಸರನ್ನು ಶೇಷಪ್ಪ ಎನ್.ವಿ. ಸೂಚಿಸಿ, ಹೊನ್ನಪ್ಪ ಅಮೆಚೂರು ಅನುಮೋದಿಸಿದರು.
ಜೂ.25 ರಂದು ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ 13 ಸ್ಥಾನಗಳನ್ನು ಗೆದ್ದುಕೊಂಡಿದ್ದರು.