*ಚಿತ್ರಗಳು: ಅಶೋಕ್ ಪೀಚೆ.
ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯುವುದರೊಂದಿಗೆ ಕಾಲಾವಧಿ ಜಾತ್ರೋತ್ಸವ ಸಂಪನ್ನಗೊಂಡಿತು. ಮಾ.9ರಿಂದ ಆರಂಭಗೊಂಡು ಕಾಲಾವಧಿ ಜಾತ್ರೋತ್ಸವ ಎ.10ರ ತನಕ ಒಂದು ತಿಂಗಳ ಕಾಲ ನಡೆದ ಜಾತ್ರೋತ್ಸವ ಸಮಾಪನಗೊಂಡಿತು. ಎ.9ರಂದು ರಾತ್ರಿ ಒತ್ತೆಕೋಲ ಕೂಡಿ ಭಂಡಾರ ತೆಗೆಯುವುದು, ಮೇಲೇರಿಗೆ ಅಗ್ನಿ ಸ್ಪರ್ಶ, ವಿಷ್ಣುಮೂರ್ತಿ ದೈವದ
ಕುಳ್ಚಾಟ ನಡೆಯಿತು. ಎ.10ರಂದು ಬೆಳಿಗ್ಗೆ 5-30ರಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಮೇಲೇರಿ ಪ್ರವೇಶ ನಡೆಯಿತು. ವಿಷ್ಣುಮೂರ್ತಿ ಮತ್ತು ರುದ್ರ ಚಾಮುಂಡಿ ದೈವಗಳು ನೆರೆದ ಭಕ್ತ ಸಮೂಹವನ್ನು ಹರಸಿತು. ಬಳಕಿ ಮಾರಿಕಳ ನಡೆಯಿತು.ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,ಸಹ ಕಾರ್ಯದರ್ಶಿ, ಚಿನ್ನಪ್ಪ ಅಡ್ಕ,
ದೇವತಕ್ಕರಾದ ರಾಜಗೋಪಾಲ ರಾಮಕಜೆ ತಕ್ಕ ಮುಖ್ಯಸ್ಥರಾದ
ಭಾಸ್ಕರ ಕೋಡಿ, ವಿಶ್ವನಾಥಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ ಪುರುಷೋತ್ತಮ ನಿಡ್ಯಮಲೆ.
ಆಡಳಿತ ಸಮಿತಿ ಸದಸ್ಯರುಗಳು, ಸಾಮಾಜಿಕ, ಧಾರ್ಮಿಕ ಹಾಗೂ
ರಾಜಕೀಯ ಮುಖಂಡೆಉ, ಅರ್ಚಕ ವೃಂದ ಮತ್ತು ಸಿಬ್ಬಂದಿವರ್ಗ ಹಾಗೂ ಊರ ಪರವೂರ ಭಗವದ್ಭಕ್ತರು ಇದ್ದರು.
ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಭ್ರಮ:
ಜಾತ್ರೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಭ್ರಮ ನಡೆಯಿತು. ಎ.2ರಂದು ರಾತ್ರಿ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ,
ಎ.5ರಂದು ರಾತ್ರಿ’ರತಿ ಕಲ್ಯಾಣ’ ಯಕ್ಷಗಾನ ಬಯಲಾಟ ನಡೆಯಿತು.ಎ.9ರಂದು ರಾತ್ರಿ ಸಾರ್ವಜನಿಕ ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಿತು.