ಪೆರಾಜೆ: ಜ್ಯೋತಿ ಪ್ರೌಢಶಾಲೆ ಪೆರಾಜೆಯಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘ ಇದರ ವತಿಯಿಂದ ಕೆ.ವಿ.ಜಿ ಸಾಧನೆ ಸಂಸ್ಮರಣೆ ಕಾರ್ಯಕ್ರಮ ಮತ್ತು ಶಾಲಾ ಗ್ರಂಥಾಲಯಕ್ಕೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.ಪೆರಾಜೆ ಶ್ರೀ ಶಾಸ್ತಾವು ದೇವಸ್ತಾನದ ಮೋಕ್ತೇಸರ ಎನ್.ಎ. ಜಿತೇಂದ್ರ ದೀಪ ಬೆಳಗಿಸಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಸಮಾರಂಭದ ಸಭಾಧ್ಯಕ್ಷತೆಯನ್ನು ಜ್ಯೋತಿ ವಿದ್ಯಾಸಂಘದ ಸಂಚಾಲಕರಾದ ಅತಿ ವಿ ಹರಿಶ್ಚಂದ್ರ ಮುಡ್ಕಜೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಲೋಕನಾಥ್ ಅಮೆಚೂರ್ ಕೆ.ವಿ.ಜಿ ಸಾಧನೆಯನ್ನು ಮನೋಜ್ಞವಾಗಿ ವರ್ಣಿಸಿದರು. ಅತಿಥಿಗಳಾಗಿ ಅಶೋಕ್ ಪೀಚೆ, ನಿವೃತ್ತ ಅಧ್ಯಾಪಕ ರಾದ ನರೇಂದ್ರ ಮುಂಡೋಡಿ ಮುಖ್ಯೋಪಾಧ್ಯಾಯರಾದ ಜಿ.ಆರ್. ನಾಗರಾಜ್ ಭಾಗ ವಹಿಸಿದ್ದರು. ಚಂದ್ರಮತಿ ನಿರೂಪಣೆಗೈದರು ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಜಿ.ಆರ್. ನಾಗರಾಜ್ ಸ್ವಾಗತಿಸಿದರು. ದೈಹಿಕ ಶಿಕ್ಷಕಿ ಬೇಬಿ ರಕ್ಷಾ ವಂದಿಸಿದರು.












