ಪೆರಾಜೆ:ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಮಾ.25ರಿಂದ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದ್ದು ಎ.10ರ ತನಕ ನಡೆಯಲಿದೆ. ಮಾ.29ರಂದು ರಾತ್ರಿ ಪಳ್ಳಿಯರ ಬಾಗಿಲು ತೆರೆದು ಕರಿಂತಿರಿ ನಾಯರ್ ಪುಲಿಮಾರುತನ್ ದೈವಗಳ ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ತುಳು ಕೋಲದ ಬೆಳ್ಳಾಟಗಳು 2 ಮತ್ತು ಅವುಗಳ ತಿರುವಪ್ಪಗಳು ನಡೆದವು. ಇಂದು ಹಗಲು
ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ, ರಾತ್ರಿ 8ರಿಂದ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ ತುಳು ಕೋಲಗಳ ಬೆಳ್ಳಾಟ 2 ,ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲಗಳ ತಿರುವಪ್ಪಗಳು ನಡೆಯಲಿದೆ.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,ಸಹ ಕಾರ್ಯದರ್ಶಿ, ಚಿನ್ನಪ್ಪ ಅಡ್ಕ, ದೇವತಕ್ಕರಾದ ರಾಜಗೋಪಾಲ ರಾಮಕಜೆ ತಕ್ಕ ಮುಖ್ಯಸ್ಥರಾದ
ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ ಪುರುಷೋತ್ತಮ ನಿಡ್ಯಮಲೆ.
ಆಡಳಿತ ಸಮಿತಿ ಸದಸ್ಯರುಗಳು, ಅರ್ಚಕ ವೃಂದ ಮತ್ತು ಸಿಬ್ಬಂದಿವರ್ಗ ಹಾಗೂ ಊರ ಭಗವದ್ಭಕ್ತರು ಇದ್ದರು.