ಪೆರಾಜೆ:ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ನಡೆಯುತ್ತಿದ್ದು ಮಾ.30ರಂದು ಬೆಳಿಗ್ಗಿನಿಂದ ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವಗಳ ಕೋಲ ನಡೆಯಿತು.ರಾತ್ರಿ 8ರಿಂದ ಕಾಳ ಪುಲಿಯನ್ ಮತ್ತು

ಪುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ ತುಳು ಕೋಲಗಳ ಬೆಳ್ಳಾಟ 2 ,ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲಗಳ ತಿರುವಪ್ಪಗಳು 2 ನಡೆಯಲಿದೆ.ಮಾ.29ರಂದು ರಾತ್ರಿ ಪಳ್ಳಿಯಾರ ಬಾಗಿಲು ತೆರೆದು ಕರಿಂತಿರಿ ನಾಯರ್ ಪುಲಿಮಾರುತನ್ ದೈವಗಳ ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ತುಳು ಕೋಲದ ಬೆಳ್ಳಾಟಗಳು 2 ಮತ್ತು ಅವುಗಳ ತಿರುವಪ್ಪಗಳು 2 ನಡೆಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು,ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ,ದೇವತಕ್ಕರಾದ ರಾಜಗೋಪಾಲ ರಾಮಕಜೆ,
ತಕ್ಕ ಮುಖ್ಯಸ್ಥರು ಉಪಸ್ಥಿತರಿದ್ದರು.










