ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ನಡೆಯುತ್ತಿದ್ದು ಮಾ.27ರಂದು ರಾತ್ರಿ ದೈವಗಳ ವೆಳ್ಳಾಟಂ ನಡೆಯಿತು. ತುಳು ಕೋಲದ ಬೆಳ್ಳಾಟ 2, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು ನಡೆಯಿತು. ಇಂದು(ಮಾ.28) ಮಧ್ಯಾಹ್ನ 12ರಿಂದ
ಬೇಟೆಕರಿಮಗನ್ ಈಶ್ವರನ್ ದೈವ, ರಾತ್ರಿ ತುಳು ಕೋಲ 2ರ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು ನಡೆಯಲಿದೆ.ಈ ಸಂದರ್ಭದಲ್ಲಿ ಆಡಳಿತ ಮೊಕ್ತೆಸರ ಎನ್.ಎ. ಜಿತೇಂದ್ರ ನಿಡ್ಯಮಲೆ, ತಕ್ಕ ಮುಖ್ಯಸ್ಥರು,ಆಡಳಿತ ಸಮಿತಿಯ ಸದಸ್ಯರು, ಭಕ್ತಭಿಮಾನಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಚಿತ್ರ:ಅಶೋಕ್ ಪೀಚೆ









