ಪೆರಾಜೆ:ಪೆರಾಜೆಯಲ್ಲಿ ವೇಗದೂತ ಬಸ್ ನಿಲುಗಡೆಗೆ ಸಾರಿಗೆ ಇಲಾಖೆ ಅನುಮತಿ ನೀಡಿದೆ. ಶಾಸಕರ ಜನತಾ ದರ್ಶನ ಕಾರ್ಯಕ್ರಮದಲ್ಲಿ ನೀಡಿದ ಮನವಿಗೆ ಸ್ಫಂದಿಸಿದ ವಿರಾಜಪೇಟ್ ಶಾಸಕರಾದ ಎ.ಎಸ್. ಪೊನ್ನಣ್ಣ ಸಾರಿಗೆ ಸಚಿವರ ಗಮನಕ್ಕೆ ತಂದು ಬಸ್ ನಿಲ್ಲಿಸಲು ಅನುಮತಿ ನೀಡಲಾಗಿದೆ. ಜನತಾದರ್ಶನ ಕಾರ್ಯಕ್ರಮದಲ್ಲಿ ಸಮಸ್ಯೆಯನ್ನು ಪೆರಾಜೆಯ ಮನು ಪೆರುಮುಂಡ ಮತ್ತು ಚಿಗುರು ಯುವಕ ಮಂಡಲ ಸಮಸ್ತೆಯನ್ನುಶಾಸಕರ ಗಮನಕ್ಕೆ ತಂದಿದ್ದರು.ಕೊಡಗು ಜಿಲ್ಲೆಯ
ಗಡಿಗ್ರಾಮವಾದ ಪೆರಾಜೆ, ಗ್ರಾಮಸ್ಥರು ಮಡಿಕೇರಿಗೆ ಹೋಗುವ ಸಂದರ್ಭದಲ್ಲಿ ವೇಗದೂತ ಬಸ್ಸುಗಳು ಪೆರಾಜೆಯಲ್ಲಿ ನಿಲ್ಲಿಸದೆ ಸಮಸ್ಯೆ ಉಂಟಾಗಿತ್ತು ಹಾಗೂ ಮಡಿಕೇರಿಯಿಂದ ಬರುವಾಗಲು ಸುಳ್ಯಕ್ಕೆ ಟಿಕೆಟ್ ಪಡೆದು ಹೆಚ್ಚು ಹಣ ಪಾವತಿಮಾಡಿ ಪೆರಾಜೆಯಲ್ಲಿ ಇಳಿಯಬೇಕಾದ ಅನಿವಾರ್ಯತೆ ಇತ್ತು. ನಾಪೊಕ್ಲು ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಮನು ಪೆರುಮುಂಡ ಹಾಗೂ, ಸ್ಥಳೀಯ ಚಿಗುರು ಯುವಕ ಮಂಡಲ ಪೆರಾಜೆಯಲ್ಲಿ ವೇಗದೂತ ಬಸ್ ಗಳನ್ನು ನಿಲುಗಡೆಗೊಳಿಸಿ ಆದೇಶ ಮಾಡುವಂತೆ ಶಾಸಕರಿಗೆ ವಿನಂತಿಸಿಕೊಂಡಿದ್ದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ್ಣ ಸ್ಪಂಧನೆ ಮಾಡಿ ಪೆರಾಜೆಯಲ್ಲಿ ವೇಗದೂತ ಬಸ್ ಗಳನ್ನು ನಿಲುಗಡೆ ಗೊಳಿಸುವಂತೆ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದರು,ಅದರಂತೆ ಪೆರಾಜೆಯಲ್ಲಿ ಎಲ್ಲಾ ವೇಗದೂತ ಬಸ್ಸುಗಳ ನಿಲುಗಡೆಗೆ ಇಲಾಖೆ ಸೂಚಿಸಿದೆ ಎಂದು ತಿಳಿದು ಬಂದಿದೆ.














