ಸುಳ್ಯ:ಮಸೀದಿಗಳು ನಮ್ಮ ಆರಾಧನಾ ಕೇಂದ್ರಗಳು ನಾವು ಭಯ ಭಕ್ತಿಯಿಂದ ಪ್ರಾರ್ಥಿಸಬೇಕಾಗಿದೆ. ಅವುಗಳ ಪಾವಿತ್ರ್ಯತೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯವಾಗಿದೆ ಎಂದು ಕೊಡಗು ಜಿಲ್ಲಾ ಖಾಝಿ ಹಾಗು ಕೇಂದ್ರ ಮುಶಾವರ ಸದಸ್ಯ ಅಬ್ದುಲ್ಲಾ ಫೈಝಿ ಹೇಳಿದರು ಅವರು ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿಯ ನವೀಕರಣಗೊಂಡ ವಿಸ್ಕ್ರತ
ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಪೇರಡ್ಕ ಜುಮಾ ಮಸೀದಿಯ ಗೌರವಾಧ್ಯಕ್ಷರು ಹಾಗು ಉರೂಸ್ ಸಮಿತಿಯ ಅಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಪೇರಡ್ಕ ಮಸೀದಿಯ ಅತ್ಯಂತ ಪುರಾತನ ಮತ್ತು ಇತಿಹಾಸ ಇರುವ ಮಸೀದಿಯಾಗಿದೆ ಇಲ್ಲಿ ಅನೇಕ ದ್ರಷ್ಠಾಂತಗಳು ನಡೆದ ಬಗ್ಗೆ ಪುರಾವೆಗಳಿವೆ. ನನ್ನ ಅಜ್ಜ ತೆಕ್ಕಿಲ್ ಮೊಹಮ್ಮದ್ ಹಾಜಿಯವರಿಂದ ಹಿಡಿದು ಅನೇಕ ಹಿರಿಯರು ಮಸೀದಿಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಈಗ ಅವರ ಮಕ್ಕಳು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವುದು ಸಂತೋಷವನ್ನುಂಟು ಮಾಡಿದೆ. ಮಸೀದಿಯ ವಿಸ್ಕ್ರತ ಕಟ್ಟಡ ಅಂಗಾಂಗ ಶುದ್ದೀಕರಣ ಕೇಂದ್ರ ನೂತನ ಶೌಚಾಲಯ ಯಾತ್ರಿಭವನ ಮುಂತಾದ ಅನೇಕ ಕಾಮಗಾರಿಗಳಾಗಿದ್ದು ಮುಂದೆಯು ತಮ್ಮಲ್ಲಾದ ಸಂಪೂರ್ಣ ಸಹಕಾರ ಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿಮುಲ್ಕಿ ಮಾತನಾಡಿದರು.ಪೇರಡ್ಕ ಜುಮಾ ಮಸೀದಿಯ ಖತೀಬರಾದ ರಿಯಾಜ್ ಫೈಝಿ ದುವಾ ನೆರವೇರಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ ಸ್ವಾಗತಿಸಿ ಪ್ರಸ್ತಾವನೆ ಗೈದರು. ಸುಳ್ಯ ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಕೆ.ಎಂ ಮುಸ್ತಫ, ಕಲ್ಲುಗುಂಡಿ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್ ಸೆಂಟ್ಯಾರ್, ಸಂಪಾಜೆ ಬದ್ರ್ ಜುಮಾ ಮಸೀದಿಯ ಅಧ್ಯಕ್ಷ ತಾಜ್ ಮಹಮ್ಮದ್, ಅರಂತೋಡು ಜುಮಾ ಮಸೀದಿ ಅಧ್ಯಕ್ಷ ಅಶ್ರಪ್ ಗುಂಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷ ಆಲಿಹಾಜಿ, ಮಾಜಿ ಅಧ್ಯಕ್ಷರಾದ ಟಿ.ಎಂ ಬಾಬಾ ಹಾಜಿ ತೆಕ್ಕಿಲ್, ಹಾಜಿ ಇಬ್ರಾಹಿಂ ಮೈಲುಕಲ್ಲು, ಟಿ.ಎ ಆರಿಫ್ ತೆಕ್ಕಿಲ್, ಕಾರ್ಯದರ್ಶಿ ಹಾಜಿ ಅಬ್ದುಲ್ ರಝಾಕ್ ತೆಕ್ಕಿಲ್, ನೂರುದ್ದಿನ್ ಅನ್ಸಾರಿ , ಹಂಸ ಮುಸ್ಲಿಯಾರ್, ಕೋಶಾಧಿಕಾರಿ ಪಿ.ಕೆ.ಉಮ್ಮರ್, ಇಂಜಿನಿಯರ್ ನಾಸಿರ್ ಪೆರಾಜೆ, ಅಬ್ಬಾಸ್ ಪಾಂಡಿ , ಮಹಮ್ಮದ್ ಕುಂಞಿ ಪೇರಡ್ಕ , ಇಬ್ರಾಹಿಂ ಸೇಟ್ಯಡ್ಕ ಮೊದಲಾದವರಿದ್ದರು ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು. ಕೇಂದ್ರಮುಶಾವರ ಸದಸ್ಯರಾಗಿ ಆಯ್ಕೆಯಾದ ಕೊಡಗು ಖಾಝಿ ಅಬ್ದುಲ್ಲಾ ಫೈಝಿಯವರನ್ನು ಮತ್ತು ಕಟ್ಟಡವನ್ನು ಕ್ಲಪ್ತ ಸಮಯದಲ್ಲಿ ನಿರ್ಮಿಸಿಕೊಟ್ಟ ಇಂಜಿನಿಯರ್ ನಾಸಿರ್ ರವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.