ಸುಳ್ಯ: ನವೀಕರಣಗೊಂಡ ಸಂಪಾಜೆ ಗ್ರಾಮದ ಪೇರಡ್ಕದ ಇತಿಹಾಸ ಪ್ರಸಿದ್ಧ ಮುಹಿಯ್ಯದ್ದೀನ್ ಜುಮಾ ಮಸೀದಿಯ ವಿಸ್ತ್ರತ ಕಟ್ಟಡ ಉದ್ಘಾಟನೆ ಫೆ. 17ರಂದು ನಡೆಯಲಿದೆ ಎಂದು ಮಸೀದಿಯ ಗೌರವಾಧ್ಯಕ್ಷರು ಹಾಗೂ ನವೀಕರಣ ಸಮಿತಿಯ ಅಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್ ಹೇಳಿದರು. ಅವರು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ಸರ್ವಧರ್ಮದವರು ಭೇಟಿ ನೀಡುವ ನೂರಾರು ವರ್ಷಗಳ
ಇತಿಹಾಸ ಇರುವ ಮುಹಿಯ್ಯದ್ದೀನ್ ಜುಮ್ಮ ಮಸೀದಿಯನ್ನು ಆಕರ್ಷಕವಾಗಿ ನವೀಕರಣ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ 60 ಲಕ್ಷದಲ್ಲಿ ನೂತನ ಅತಿಥಿ ಗೃಹ ಮತ್ತು ಶೌಚಾಲಯ ನಿರ್ಮಿಸಲಾಗಿದೆ. ಹಾಗೂ ದಾನಿಗಳ ನೆರವಿನಿಂದ ವಿವಿಧ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ .ಕೆಪಿಸಿಸಿ ಸಂಯೋಜಕರಾಗಿರುವ ಜಿ. ಕೃಷ್ಣಪ್ಪರವರು ಎರಡು ಲಕ್ಷ ರೂಪಾಯಿ ವೆಚ್ಚದ ಗ್ರಾನೈಟ್ ಕೊಡುಗೆಯಾಗಿ ನೀಡಿದ್ದಾರೆ. ಮುಸ್ಲಿಂ ಹಿಂದೂ ಬಾಂಧವರು ಇತರ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ದಾನವಾಗಿ ನೀಡಿದ್ದಾರೆ ಎಂದು ಅವರು ಹೇಳಿದರು.ನವೀಕರಣಗೊಂಡ ಮಸೀದಿಯನ್ನು ಅಲ್ ಹಾಜ್ ಶೈಖುನಾ ಎಂ.ಎಂ.ಅಬ್ದುಲ್ಲ ಫೈಝಿ ಉದ್ಘಾಟಿಸಲಿದ್ದಾರೆ. ದುವಾವನ್ನು ಎಂ.ಜೆ.ಎಂ.ಪೇರಡ್ಕ ಖತೀಬರಾದ ರಿಯಾಝ್ ಫೈಝಿ ನಿರ್ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಟಿ.ಎಂ.ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ. ರಾಜಕೀಯ,ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸರ್ವಧರ್ಮ ಸಮ್ಮೇಳನ:
ಫೆ.17ರಿಂದ 19ರ ತನಕ ಪೇರಡ್ಕ ವಲಿಯುಲ್ಲಾಹಿ ದರ್ಗಾಶರೀಫ್ನಲ್ಲಿ ಉರೂಸ್ ಸಮಾರಂಭ ನಡೆಯಲಿದೆ. ಇದರ ಅಂಗವಾಗಿ 17 ರಂದು ಸಂಜೆ 7 ರಿಂದ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಕೇರಳ ರಾಜ್ಯದ ಬಂದರು ಮತ್ತು ವಸ್ತು ಸಂಗ್ರಹಾಲಯ ಸಚಿವರಾದ ಅಹಮ್ಮದ್ ದೇವರಕೋವಿಲ್ ಉದ್ಘಾಟಿಸಲಿದ್ದಾರೆ. ಎಲ್ಲಾ ಧರ್ಮದ ಧಾರ್ಮಿಕ ಮುಖಂಡರು, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಹಾಗು ಉರೂಸ್ ಸಮಿತಿ ಕಾರ್ಯದರ್ಶಿ ಜಿ.ಕೆ. ಹಮೀದ್ ಗೂನಡ್ಕ, ಮಸೀದಿ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ ಟಿ.ಎಂ.,ಅಬ್ದುಲ್ ಖಾದರ್ ಮೊಟ್ಟೆಂಗಾರ್, ಪೇರಡ್ಕ ಎಂ.ಆರ್.ಡಿ.ಎ. ಅಧ್ಯಕ್ಷ ಜಾಕೀರ್ ಹುಸೈನ್, ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಸಾಜಿದ್ ಅಝ್ಹರಿ ಉಪಸ್ಥಿತರಿದ್ದರು.