ಪೇರಡ್ಕ: ಮುಹಿಯಾದ್ದೀನ್ ಜುಮಾ ಮಸ್ಜಿದ್ ಪೇರಡ್ಕ ಎಸ್. ಕೆ. ಎಸ್. ಎಸ್. ಎಫ್ ಪೇರಡ್ಕ ಗೂನಡ್ಕ ಇದರ ವತಿಯಿಂದ ಪೇರಡ್ಕ ಖತೀಬ್ ರಿಯಾಜ್ ಫೈಝಿ ಉಸ್ತಾದ್ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. 3 ವರ್ಷದ ಕಾಲ ಪೇರಡ್ಕ ಜಮಾಯತ್ನಲ್ಲಿ
ಕೆಲಸ ಮಾಡಿ ಉದ್ಯೋಗ ನಿಮಿತ್ತ ಕೇರಳದ ಮಸೀದಿಯಲ್ಲಿ ಸೇವೆ ಸಲ್ಲಿಸಲು ತೆರಳುತ್ತಿರುವ ಉಸ್ತಾದ್ ರಿಗೆ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ. ಆರ್. ಡಿ. ಎ. ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಮಾತನಾಡಿ ಉಸ್ತಾದ್ ಅವರು ಪೇರಡ್ಕದಲ್ಲಿ ಸೇವೆಗೆ ಕೃತಜ್ಞತೆ ಸಲ್ಲಿಸಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಜಮಾಯತ್ ಕಮಿಟಿ ಕಾರ್ಯದರ್ಶಿ ಪಿ. ಕೆ. ಉಮ್ಮರ್, ಉಪಾಧ್ಯಕ್ಷ ಟಿ. ಬಿ. ಹನೀಫ್, ಸಾಜೀದ್, ರಝಾಕ್ ಎ. ಎ, ಹಸೈನಾರ್ ಮುಸ್ಲಿಯಾರ್, ಹನೀಫ್ ಮೊಟ್ಟಂಗಾರ್, ಸಿನಾನ್ ದರ್ಕಾಸ್ ಉಪಸ್ಥಿತರಿದ್ದರು. ಅಬ್ದುಲ್ ಖಾದರ್ ಮೊಟ್ಟಂಗಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು









