ಗೂನಡ್ಕ:ಪೇರಡ್ಕ ಗೂನಡ್ಕ ಪ್ರದೇಶವು ಹಿಂದಿನಿಂದಲೂ ಸೌಹಾರ್ದತೆಯ ಪ್ರದೇಶವಾಗಿದೆ. ಇಲ್ಲಿ ಹಲವಾರು ಸರ್ವಧರ್ಮಿಯರು ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ನಾವೆಲ್ಲರು ಜಾತ್ಯಾತೀತ ಮನೋಭಾವದಿಂದ ಸಹಬಾಳ್ವೆಯ ಜೀವನ ಸಡೆಸಬೇಕು ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು. ಅವರು ಪೇರಡ್ಕ ತೆಕ್ಕಿಲ್ ಮೊಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ವಲಿಯುಲ್ಲಾಹಿ ದರ್ಗಾ ಶರೀಪಿನ ಉರೂಸ್ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದರು. ಊರಿನ ಅಭಿವೃದ್ಧಿ
ಬಗ್ಗೆ ಪರಿಸರದ ಸೌಂದದರ್ಯದ ಹಾಗೂ ಸೌಹಾರದತೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಅವರನ್ನು ಮಸೀದಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪೇರಡ್ಕ ಜುಮಾ ಮಸೀದಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದರು. ಸಯ್ಯದ್ ಝೈನುಲ್ ಆಬಿದೀನ್ ಜಿಪ್ರಿತಂಗಳ್ ಬೆಳ್ತಂಗಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ದುವಾ ನೆರೆವೇರಿಸಿದರು.
ಧಾರ್ಮಿಕ ಪ್ರಭಾಷಣವನ್ನು ನೀಡಿದ ಖ್ಯಾತ ವಾಗ್ಮಿ ಅಲ್ ಹಾಜ್ ಸಿರಾಜುದ್ಧೀನ್ ದಾರಿಮಿ ಕಕ್ಕಾಡ್ ನಮ್ಮ ಆಚಾರ ವಿಚಾರದಲ್ಲಿ ವ್ಯತ್ಯಾಸ ಇದ್ದರು ಮನುಷ್ಯತ್ವ ಬೇಕು, ನಾನು ಎಂಬ ಅಹಂಬಾವ ಇರಬಾರದು ಸ್ನೇಹ ಜೀವಿಯಾಗಿ ಬಾಳಬೇಕು ಎಂದರು. ಪೇರಡ್ಕ ಮಸೀದಿ ಖತೀಬರಾದ ರಿಯಾಝ್ ಪೈಝಿ ಎಮ್ಮೆಮಾಡು ದುವಾ ನೆರವೇರಿಸಿದರು.
ವೇದಿಕೆಯಲ್ಲಿ ಕಲ್ಲುಗುಂಡಿ ಜುಮಾ ಮಸೀದಿ ಖತೀಬ್ ನಈಮ್ ಪೈಝಿ, ಅರಂತೋಡು ಜುಮಾ ಮಸೀದಿ ಖತೀಬ್ ಅಲ್ ಹಾಜ್ ಇಸಾಕ್ ಬಾಖವಿ, ಬೆಳ್ಳಾರೆ ಜುಮಾಮಸೀದಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ಮಂಗಳ , ದ.ಕ ಜಿಲ್ಲಾ ಮದರಸ ಮ್ಯಾನೇಜ್ ಮೆಂಟ್ ಕೋಶಾಧಿಕಾರಿ ಅಬ್ದುಲ್ ಖಾದರ್ ಬಾಯಂಬಾಡಿ, ಅಬ್ದುಲ್ ಫತ್ತಾಹ್ ಖಾಸಿಮಿ, ಹಸೈನಾರ್ ಮುಸ್ಲಿಯಾರ್, ಅರಂತೋಡು ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಸಂಪಾಜೆ ಜುಮಾ ಮಸೀದಿ ಅಧ್ಯಕ್ಷ ಹಮೀದಿಯ, ಕೊಯನಾಡು ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಕೊಯನಾಡು, ಸುನ್ನಿಮಹಲ್ ಫೆಡರೇಶನ್ ಅಧ್ಯಕ್ಷ ಹಮೀದ್ ಹಾಜಿ, ತಾಜ್ ಮೊಹಮ್ಮದ್ ಸಂಪಾಜೆ,ಸಜ್ಜನ ಪ್ರತಿಷ್ಟಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ, ಮಾನವ ಸಂಪನ್ಮೂಲ ಬೆಂಗಳೂರು ಇದರ ವ್ಯವಸ್ಥಾಪಕ ಪಿ.ಎಂ ಹಾರೀಸ್ ತೆಕ್ಕಿಲ್ ಪೇರಡ್ಕ , ಎ.ಕೆ. ಹಸೈನಾರ್ ಕಲ್ಲುಗುಂಡಿ, ಸಿ.ಎಫ್.ಸಿ ಕಲ್ಲುಗುಂಡಿ ಅಧ್ಯಕ್ಷ ಹಸೈನಾರ್ ಚಟ್ಟೆಕ್ಕಲ್, ಮಾಜಿ ಅಧಕ್ಷರಾದ ಆಲಿ ಹಾಜಿ, ಹಾಜಿ ಇಬ್ರಾಹಿಂ ಮೈಲುಕಲ್ಲು, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಮುನೀರ್ ದಾರಿಮಿ, ಜಮಾಅತ್ ಕಾರ್ಯದರ್ಶಿ ಪಿ.ಕೆ ಉಮ್ಮರ್ ಮೊದಲಾದವರು ಉಪಸ್ಥಿತರಿದ್ದರು. ಎಂ.ಆರ್.ಡಿ.ಎ. ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಸ್ವಾಗತಿಸಿದರು. ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು.