ಪೇರಡ್ಕ:ಹೊಸ ತಲೆಮಾರಿಗೆ ಈ ದೇಶದ ನೈಜ ಇತಿಹಾಸ ತಿಳಿಯುವಂತಾಗಬೇಕು. ನಮ್ಮ ನಾಡಿನ ಸಾಮರಸ್ಯ ಮತ್ತು ಸೌಹಾರ್ದತೆಯ ಪರಂಪರೆ ಮುಂದುವರಿಯಬೇಕು.ಆಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಪೇರಡ್ಕ ಜಮಾಅತ್ ಅಧ್ಯಕ್ಷ ಹಾಗೂ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಮ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಹೇಳಿದರು. ಪೇರಡ್ಕ ಗೂನಡ್ಕ ಮಖಾಂ ಉರೂಸ್ನ ಭಾಗವಾಗಿ
ತೆಕ್ಕಿಲ್ ಮೊಹಮದ್ ಹಾಜಿ ವೇದಿಕೆಯಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೇರಡ್ಕ ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಸೌಹಾರ್ದ ಸಂದೇಶ ನೀಡಿ ಎಲ್ಲಾ ಧರ್ಮೀಯರು ಈ ರೀತಿ ಒಂದುಗೂಡಿ ಒಂದೇ ವೇದಿಕೆಯಲ್ಲಿ ಪರಸ್ಪರ ಮುಕ್ತವಾಗಿ ಮಾತನಾಡುವ ಅವಕಾಶ ಎಲ್ಲೆಡೆ ಸೃಷ್ಠಿಯಾಗಬೇಕು ಆಗ ನೈಜ ಸೌಹಾರ್ದತೆ ಸಾಧ್ಯವಾಗುತ್ತದೆ ಎಂದರು. ಕಲ್ಲುಗುಂಡಿ ಚರ್ಚ್ ಧರ್ಮಗುರು ಫಾ. ಪೌಲ್ ಕ್ರಾಸ್ತಾ, ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಸುಡಾ ಅಧ್ಯಕ್ಷ ಕೆ.ಎಂ ಮುಸ್ತಫಾ ಸುಳ್ಯ, ಅರಂತೋಡು ಮಸೀದಿಯ
ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟಮನೆ, ಸಂಪಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್ ಕೆ ಹನೀಫ ಸಂಪಾಜೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ತೊಡಿಕಾನ ದೇವಸ್ಥಾನ ಸಮಿತಿಯ ತೀರ್ಥರಾಮ ಗೌಡ ಪರ್ನೋಜಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ವರ್ತಕರ ಸಂಘದ ಅಧ್ಯಕ್ಷ ಚಕ್ರಪಾಣಿ ಯು.ಬಿ ಮುಂತಾದವರು ಮಾತನಾಡಿದರು. ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ದೇವಸ್ಥಾನದ
ಅಧ್ಯಕ್ಷ ಜಗದೀಶ್ ರೈ, ಮೂಸಾ ಕುಂಞಿ ಪೈಂಬೆಚ್ಚಾಲ್, ಎಸ್ ಶಂಸುದ್ದೀನ್, ಉಮ್ಮರ್ ಕೆ.ಎಸ್, ಅಬೂಬಕರ್ ಅಡ್ಕಾರ್, ತಾಜ್ ಮಹಮ್ಮದ್, ಭವಾನಿ ಶಂಕರ ಕಲ್ಮಡ್ಕ, ಸಂತೋಷ್ ಕ್ರಾಸ್ತಾ, ಕಲ್ಲುಗುಂಡಿ, ಲ್ಯಾನ್ಸಿ ಡಿಸೋಜ, ಸಂಪತ್ ಕುಮಾರ್ ಎಚ್.ಎಂ, ಇಕ್ಬಾಲ್ ಸುಣ್ಣಮೂಲೆ, ಅಶ್ರಫ್ ಗುಂಡಿ, ಅಬ್ದುಲ್ ಖಾದರ್ ಪಟೇಲ್, ಅಬ್ದುಲ್ ಕಲಾಂ ಸುಳ್ಯ, ಸಾಜಿದ್ ಐ.ಜಿ ಗೂನಡ್ಕ, ರಝಾಕ್ ಸೂಪರ್ ಕಲ್ಲುಗುಂಡಿ, ಎ.ಕೆ ಇಬ್ರಾಹಿಂ ಕಲ್ಲುಗುಂಡಿ, ಇರ್ಷಾದ್ ಬದ್ರಿಯಾ, ಎಸ್ ಪಿ ಅಬ್ದುರ್ರಹ್ಮಾನ್ ಸಂಪಾಜೆ, ರಫೀಕ್ ಪ್ರಗತಿ, ರಫೀಕ್ ಕರಾವಳಿ ಮುಂತಾದವರು ಉಪಸ್ಥಿತರಿದ್ದರು. ಎಂ.ಆರ್.ಡಿ.ಎ ಅಧ್ಯಕ್ಷರಾದ ಜಿ.ಕೆ ಹಮೀದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು.












