ಪೇರಡ್ಕ:ಸಂಪಾಜೆ ಗ್ರಾಮದ ಪೇರಡ್ಕ ದರ್ಗಾ ಶರೀಫ್ನ ಉರೂಸ್ ಹಾಗೂ ಸರ್ವಧರ್ಮ ಸಮ್ಮೇಳನ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಸಮಾರೋಪಗೊಂಡಿತು.
ಗೂನಡ್ಕ ಪೇರಡ್ಕ ಎಂಜೆಎಂ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು. ಅಜೀಜ್ ದಾರಿಮಿ ಚೊಕ್ಕಬೆಟ್ಟು ಮುಖ್ಯ ಪ್ರಭಾಷಣ ಮಾಡಿದರು.ಅತಿಥಿಗಳಾಗಿ ಸ್ಥಳೀಯ
ಮಸೀದಿ ಖತೀಬರಾದ ರಿಯಾಜ್ ಫೈಜಿ, ಡಾ. ಡಿ.ವಿ. ಲೀಲಾದರ್, ಸದಾನಂದ ಮಾವಜಿ, ಕೆ.ಎಂ.ಮುಸ್ತಫ,
ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್, ಜಗದೀಶ್ ರೈ ಸಂಪಾಜೆ, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ ಚಕ್ರಪಾಣಿ, ಅಬ್ದುಲ್ ಗಫೂರ್ ಕಲ್ಮಡ್ಕ, ಮೂಸ ಪೈಂಬಾಚ್ಚಾಲ್ ಹಮೀದ್ ಕುತ್ತಮೊಟ್ಟೆ, ಉಪಸ್ಥಿತರಿದ್ದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸವನ್ನು ಸ್ಥಳೀಯ ಖತೀಬರಾದ ರಿಯಾಜ್ ಫೈಜಿ ನೀಡಿದರು, ಸೈಯದ್ ಜೈನುಲ್ ಆಬಿದೀನ್ ತಂಙಳ್ ದುಗಲಡ್ಕ ದುವಾ ಆಶೀರ್ವಚನ ನೆರವೇರಿಸಿಸರು. ಜಿ.ಕೆ. ಹಮೀದ್ ಸ್ವಾಗತಿಸಿ, ಟಿ.ಎಂ .ಶಹೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಂದಿಸಿದರು. ಸಮಾರಂಭದ ಕೊನೆಯಲ್ಲಿ ಅನ್ನದಾನ ನಡೆಯಿತು.