ಪೇರಡ್ಕ:ಸುಳ್ಯ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಪೇರಡ್ಕ ಗೂನಡ್ಕ ದರ್ಗಾ ಶರೀಫಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು ನಡೆಯಲಿದೆ. ಎರಡು ದಿನಗಳಲ್ಲಿ ಕೇರಳ ಕರ್ನಾಟಕದ ಸುಪ್ರಸಿದ್ಧ ವಾಗ್ಮಿಗಳ ಧಾರ್ಮಿಕ ಉಪನ್ಯಾಸ ನಡೆದಿದ್ದು ಇಂದು ಸಮಾರೋಪ ಸಮಾರಂಭ, ಧಾರ್ಮಿಕ ಉಪನ್ಯಾಸ ಸೌಹಾರ್ದ ಸಮ್ಮೇಳನ ಹಾಗೂ
ಅನ್ನದಾನ ನಡೆಯಲಿದೆ.ಸರ್ವ ಧರ್ಮ ಸಮ್ಮೇಳನದಲ್ಲಿ ವಿವಿಧ ಧರ್ಮಗಳ ಗುರುಗಳು, ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರುಗಳು ಜನಪ್ರತಿನಿಧಿಗಳು, ಪಾಲ್ಗೊಳ್ಳಲಿದ್ದಾರೆ. ಇಂದು(ಜ.11ರಂದು) ಸಂಜೆ 5ಕ್ಕೆ ಮೌಲೀದ್ ಪಾರಾಯಣ ನಡೆಯಲಿದೆ. 6.45ಕ್ಕೆ
ಸರ್ವ ಧರ್ಮ ಸೌಹಾರ್ದ ಸಂಗಮ ನಡೆಯಲಿದೆ.
ಎಂ.ಜೆ.ಎಂ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸುವರು.
ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ
ಡಾ. ಲೀಲಾಧರ್ ಡಿ.ವಿ ಉದ್ಘಾಟಿಸುವರು.ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಪೇರಡ್ಕ ಸೌಹಾರ್ದ ಸಂದೇಶ ನೀಡುವರು. ಕಲ್ಲುಗುಂಡಿ

ಚರ್ಚ್ ಧರ್ಮಗುರು ಫಾ. ಪೌಲ್ ಕ್ರಾಸ್ತಾ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ,ಯು.ಬಿ. ಚಕ್ರಪಾಣಿ,ಎಂ.ಬಿ.ಸದಾಶಿವ, ಎಸ್.ಕೆ ಹನೀಫ ಮತ್ತಿತರರು ಭಾಗವಹಿಸಲಿದ್ದಾರೆ.ಮಗ್ರಿಬ್ ನಮಾಝಿನ ಬಳಿಕ
ಸಮಾರೋಪ ಸಮಾರಂಭ ಎಂ.ಜೆ.ಎಂ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎನ್.ಪಿ.ಎಂ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ನೇತೃತ್ವ ವಹಿಸುವರು. ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಪೇರಡ್ಕ ಧಾರ್ಮಿಕ ಉಪನ್ಯಾಸ ನೀಡುವರು.
ಜ.9ರಂದುಎಂ.ಜೆ.ಎಂ.ಪೇರಡ್ಕ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಧ್ವಜಾರೋಹಣ ನೆರವೇರಿಸುವುದರೊಂದಿಗೆ ಆರಂಭಗೊಂಡ ಉರೂಸ್ ಸಮಾರಂಭದಲ್ಲಿ ನಡೆಯಲಿದೆ.ಉಸ್ತಾದ್ ಇರ್ಷಾದ್ ದಾರಿ ಮಿತ್ತಬೈಲ್ ನೇತೃತ್ವದಲ್ಲಿ ಉರೂಸ್ ಉದ್ಘಾಟನೆ ಮತ್ತು ಖತ್ಮುಲ್ ಖುರ್ಆನ್ ದುಆಃ ನಡೆಯಿತು. ಪೇರಡ್ಕ ಎಂ.ಜೆ.ಎಂ ಅಧ್ಯಕ್ಷ
ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಎರ್ಮಾಳ್
ಜಾಮಿಯಾ ಮಸೀದಿ ಖತೀಬರಾದ
ಉಸ್ತಾದ್ ಸಯ್ಯದ್ ಅಲಿ ಮನ್ನಾನಿ ಧಾರ್ಮಿಕ ಉಪನ್ಯಾಸ ನೀಡಿದರು.
ಜ.10ರಂದು ಮಗ್ರಿಬ್ ನಮಾಝಿನ ಬಳಿಕ ನಡೆದ ಸಮಾರಂಭದಲ್ಲಿ
ಎಂ.ಜೆ.ಎಂ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸಿದ್ದರು.
ಖತೀಬರಾದ ಅಹ್ಮದ್ ನಈಂ ಮಅಬರಿ ಫೈಝಿ ಪೇರಡ್ಕ ಉದ್ಘಾಟಿಸಿದರು. ಅಬೂಬಕ್ಕರ್ ಹುದವಿ ಮುಂಡಪರಂಬ್ ಕೇರಳ ಧಾರ್ಮಿಕ ಉಪನ್ಯಾಸ ನೀಡಿದರು.












