ಪೇರಡ್ಕ: ಪೇರಡ್ಕ ವಲಿಯುಲ್ಲಾಹಿ ದರ್ಗಾ ಷರೀಪ್ ಉರೂಸ್ ಕಾರ್ಯಕ್ರಮಕ್ಕೆ ಧ್ವಜಾರೊಹಣ ಮೂಲಕ ಚಾಲನೆ ನೀಡಲಾಯಿತು. ಪೇರಡ್ಕ ಮಸೀದಿಯ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಧ್ವಜಾರೊಹಣ ನೆರವೇರಿಸಿದರು.ಖತೀಬರಾದ ಅಹಮ್ಮದ್ ಮಅಬರಿ ನಈಂ ಫೈಝಿ ದುವಾಃ ನೆರವೇರಿಸಿದರು. ಕಾರ್ಯಕ್ರಮದಲ್ಲಿ
ಉದ್ಯಮಿಗಳಾದ ಅಬ್ದುಲ್ ಖಾದರ್ ಹಾಜಿ ಹಾಗೂ ಶಮೀರ್ ಪಾಶಾ ಕೊಲಾರ್ ಇವರನ್ನು ಜಮಾಅತ್ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅರಂತೋಡು ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಕಾರ್ಯದರ್ಶಿ ಮೂಸಾನ್ ಕಲ್ಲುಗುಂಡಿ, ಜಮಾಅತ್ ಅಧ್ಯಕ್ಷ ಆಲಿ ಹಾಜಿ, ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ ಸಂಟ್ಯಾರ್, ಪೇರಡ್ಕ ಮಸೀದಿ ಮಾಜಿ ಅಧ್ಯಕ್ಷ ಇಬ್ರಾಹಿಂ ಕರಾವಳಿ, ಮಹಮ್ಮದ್ ಕುಂಞಿ ತೆಕ್ಕಿಲ್, ಆರೀಪ್ ತೆಕ್ಕಿಲ್, ಮುನೀರ್ ದಾರಿಮಿ ಟಿ ಬಿ, ಹನೀಪ ಸಾಜಿದ್ ಐ ಜಿ ಹಾಗೂ ಜಮಾಅತರು ಕಲ್ಲುಗುಂಡಿ ಜಮಾಅತರು ಇದ್ದರು. ಎಂ ಆರ್ ಡಿ ಎ ಅಧ್ಯಕ್ಷ ಜಿ ಕೆ ಹಮೀದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಖಾದರ್ ಮೊಟ್ಟೆಂಗಾರ್ ವಂದಿಸಿದರು. ನಂತರ ದರ್ಗಾ ಶರೀಪ್ನಲ್ಲಿ ಮಕಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ ನಡೆಯಿತು.












