ಪೇರಡ್ಕ: ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್ ಗೂನಡ್ಕ ಉರೂಸ್ ಸಮಾರಂಭಕ್ಕೆ ಪೇರಡ್ಕ ಜುಮಾ ಮಸೀದಿ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು. ಖಬರ್ ಝಿಯಾರತ್ ಮತ್ತು ದರ್ಗಾದಲ್ಲಿ ನಡೆದ ದುವಾದ ನೇತೃತ್ವವನ್ನು ಖತೀಬರಾದ ರಿಯಾಝ್ ಪೈಝಿ ಎಮ್ಮೆಮಾಡು ಅವರು ನೆರವೇರಿಸಿದರು. ಸಮಾರಂಭದಲ್ಲಿ
ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಮಾಜಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಮೈಲು ಕಲ್ಲು, ಆಲಿ ಹಾಜಿ, ಬಹು ಫತಾಹ್ ಖಾಸಿಮಿ, ಬಹು| ಹಸೈನಾರ್ ಮುಸ್ಲಿಯಾರ್, ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಮುನೀರ್ ದಾರಿಮಿ, ತೆಕ್ಕಿಲ್ ಮಹಮ್ಮದ್ ಕುಂಇ’ ಪೇರಡ್ಕ, ಪಾಂಡಿ ಅಬ್ಬಾಸ್, ಕೆ.ಎಂ ಉಸ್ಮಾನ್, ಟಿ.ಎ ರಜಾಕ್ ಹಾಜಿ ತೆಕ್ಕಿಲ್, ಹನೀಫ್ ತೆಕ್ಕಿಲ್, ಸಿನಾನ್ ಜಡ್ಜ್, ಎಂ.ಆರ್.ಡಿ.ಎ ದಫ್ ಉಸ್ತಾದ್ ಹಾಜಿ ರಜಾಕ್ ಅಡಿಮರಡ್ಕ, ಹನೀಫ್ ಮೊಟ್ಟೆಂಗಾರ್, ಸಾಧಿಕ್ ಪೊಲೀಸ್, ಟಿ.ಎಂ ಜಾವೇದ್ ತೆಕ್ಕಿಲ್, ಕೆ.ಎಂ ಮೂಸಾನ್ ಅರಂತೋಡು, ಅಬ್ದುಲ್ ಮಜೀದ್ ಅರಂತೋಡು, ಅಲಿ ಸೆಟ್ಯಡ್ಕ, ಟಿ.ಎಂ ಲತೀಫ್ ತೆಕ್ಕಿಲ್, ಟಿ.ಬಿ ಅಬ್ದುಲ್ಲ ತೆಕ್ಕಿಲ್, ಜಾಕಿರ್ ಪಾಲಡ್ಕ ಮೊದಲಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ದರ್ಗಾ ಶರೀಫಿನ ಅಲಂಕಾರ ನಡೆಯಿತು ಮತ್ತು ತೆಕ್ಕಿಲ್ ಕುಟುಂಬಸ್ಥರ ವತಿಯಿಂದ ಸಿಹಿ ಊಟವನ್ನು ವಿತರಣೆ ಮಾಡಲಾಯಿತು.
ಸಂಜೆ ತೆಕ್ಕಿಲ್ ಮೊಹಮ್ಮದ್ ಹಾಜಿ ವೇಧಿಕೆಯಲ್ಲಿ ನಡೆಯುವ ಧಾರ್ಮಿಕ ಉಪನ್ಯಾಸ ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಲಿದ್ದಾರೆ, ದುವಾ ನೇತೃತ್ವವನ್ನು ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಗಳ್ ಬೆಳ್ತಂಗಡಿ ನೆರವೇರಿಸಲಿದ್ದಾರೆ ಹಾಗೂ ವಿಶೇಷ ಆಹ್ವಾನಿತರಾಗಿ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಫರೀದ್ ಭಾಗವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಖ್ಯಾತ ವಾಗ್ಮಿ ಅಲ್ ಹಾಜ್ ಸಿರಾಜುದ್ಧೀನ್ ದಾರಿಮಿ ಕಕ್ಕಾಡ್ ಕೇರಳ ಇವರು ನೀಡಲಿದ್ದಾರೆ. ಹಾಗು ವಿವಿಧ ಧಾರ್ಮಿಕ ಮತ್ತು ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಜಮಾಅತ್ ಕಾರ್ಯದರ್ಶಿಗಳಾದ ಪಿ.ಕೆ ಉಮ್ಮರ್ ಹಾಗು ಜಿ.ಕೆ ಹಮೀದ್ ಗೂನಡ್ಕ ತಿಳಿಸಿದ್ದಾರೆ. .