ಪೇರಡ್ಕ: ಎಲ್ಲಾ ಜಾತಿ ಧರ್ಮಗಳಿಗಿಂತ ಮಾನವ ಧರ್ಮ ಮಿಗಿಲಾದುದು. ಮಾನವ ಧರ್ಮ, ಮಾನವೀಯತೆ, ಮನುಷ್ಯತ್ವವನ್ನು ಪೋಷಿಸಲು ಎಲ್ಲಾ ಧರ್ಮಗಳ ಮಧ್ಯೆ ಸಾಮರಸ್ಯ, ಸಹೋದರತೆ ಅತೀ ಅಗತ್ಯ ಎಂದು ಪೇರಡ್ಕದ ವಲಿಯುಲ್ಲಾಹಿ ದರ್ಗಾಶರೀಫ್ನ ಉರೂಸ್ ಕಾರ್ಯಕ್ರಮದ ಅಂಗವಾಗಿ ಫೆ.17ರಂದು ನಡೆದ ಸರ್ವ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಧರ್ಮ
ಸಮ್ಮೇಳನದಲ್ಲಿ ಪೇರಡ್ಕ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬರಾದ ರಿಯಾಝ್ ಫೈಝಿ ದುಃವಾ ನೆರವೇರಿಸಿದರು.ಕಲ್ಲುಗುಂಡಿ ಸಂತ ಫ್ರಾನ್ಸಿಸ್ ಸೇವಿಯರ್ ಚರ್ಚ್ನ ಧರ್ಮಗುರು ಫಾ.ಫೌಲ್ ಕ್ರಾಸ್ತಾ, ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ್, ಕೆಪಿಸಿಸಿ ಸಂಯೋಜಕರಾದ ಜಿ.ಕೃಷ್ಣಪ್ಪ, ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ, ಪೇರಡ್ಕ ಜುಮ್ಮಾ ಮಸ್ಜಿದ್ ಅಧ್ಯಕ್ಷ ಎಸ್.ಆಲಿ ಹಾಜಿ, ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, ಸುಳ್ಯ ತಾಲೂಕು ಅಲ್ಪ ಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ,

ಕಲ್ಲುಗುಂಡಿ ಮಹಾವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷ ಜಗದೀಶ್ ರೈ, ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ತರ್,ನ.ಪಂ.ಸದಸ್ಯ ಕೆ.ಎಸ್.ಉಮ್ಮರ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಬೆಟ್ಟ,ಕೆವಿಜಿ ಆಯುರ್ವೇದ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಜಿ.ಜಿ, ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯ ಆಲಡ್ಕ, ವಕೀಲರಾಕ ಮೂಸಾ ಕುಂಞಿ ಪೈಂಬೆಚ್ಚಾಲ್, ಪ್ರಮುಖರಾದ ಇಬ್ರಾಹಿಂ ಹಾಜಿ ಕತ್ತರ್,ಮಜೀದ್ ನಡುವಡ್ಕ, ದಿನಕರ ಸಣ್ಣಮನೆ, ಸಿರಿಲ್ ಕ್ರಾಸ್ತಾ, ಸಿದ್ದಿಕ್ ಕೊಕ್ಕೊ, ತಾಜ್ಮಹಮ್ಮದ್ ಸಂಪಾಜೆ, ಎಸ್.ಕೆ.ಹನೀಫ್, ಎಸ್.ಪಿ.ಅಬ್ದುಲ್ ರಹಿಮಾನ್, ಅಬ್ದುಲ್ ರಝಾಕ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗು ಉರೂಸ್ ಸಮಿತಿ ಕಾರ್ಯದರ್ಶಿ ಜಿ.ಕೆ.ಹಮೀದ್ ಗೂನಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಸೀದಿ ನವೀಕರಣಕ್ಕೆ ಆರ್ಥಿಕ ಸಹಕಾರ ನೀಡಿದ ಜಿ.ಕೃಷ್ಣಪ್ಪ ಹಾಗು ಅಬ್ದುಲ್ ರಹಿಮಾನ್ ಸಂಕೇಶ್ ಅವರನ್ನು ಸನ್ಮಾನಿಸಲಾಯಿತು.
ಧಾರ್ಮಿಕ ಸಮ್ಮೇಳನ:
ಬಳಿಕ ಉರೂಸ್ ಧಾರ್ಮಿಕ ಸಮ್ಮೇಳನ ನಡೆಯಿತು. ಪೇರಡ್ಕ ಎಂ.ಜೆ.ಎಂ ಖತೀಬರಾದ ರಿಯಾಝ್ ಫೈಝಿ ಉದ್ಘಾಟಿಸಿದರು. ಸಲೀಂ ವಾಫಿ ಅಂಬಲಕಂಡಿ ಮುಖ್ಯ ಪ್ರಭಾಷಣ ಮಾಡಿದರು. ಪೇರಡ್ಕ ಎಂ.ಜೆ.ಎಂ.ಅಧ್ಯಕ್ಷ ಎಸ್.ಆಲಿ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕಲ್ಲುಗುಂಡಿ ಎಂ.ಜೆ.ಎಂ.ಖತೀಬರಾದ ನಈಮ್ ಫೈಝಿ, ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಹಮೀದ್ ಬೀಜಕೊಚ್ಚಿ, ಉನೈಸ್ ಪೆರಾಜೆ, ಟಿ.ಇ.ಆರಿಫ್ ತೆಕ್ಕಿಲ್, ಪಾಂಡಿ ಅಬ್ಬಾಸ್, ಹಸೈನಾರ್ ಚಟ್ಟೆಕಲ್ಲು, ಟಿ.ಎ.ಮಹಮ್ಮದ್ ಕುಂಞಿ ತೆಕ್ಕಿಲ್ ಪೇರಡ್ಕ, ಮಸೀದಿ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ ಟಿ.ಎಂ.,ಅಬ್ದುಲ್ ಖಾದರ್ ಮೊಟ್ಟೆಂಗಾರ್, ಪೇರಡ್ಕ ಎಂ.ಆರ್.ಡಿ.ಎ. ಅಧ್ಯಕ್ಷ ಜಾಕೀರ್ ಹುಸೈನ್, ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಸಾಜಿದ್ ಅಝ್ಹರಿ ಮತ್ತಿತರರು ಉಪಸ್ಥಿತರಿದ್ದರು. ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಹಾಗು ಉರೂಸ್ ಸಮಿತಿ ಕಾರ್ಯದರ್ಧಿ ಜಿ.ಕೆ. ಹಮೀದ್ ಗೂನಡ್ಕ ಸ್ವಾಗತಿಸಿದರು.