ಸಂಪಾಜೆ: ಸಂಪಾಜೆ ಗ್ರಾಮದ ಪೇರಡ್ಕ ಮುಹಿದ್ಧೀನ್ ಜುಮಾ ಮಸೀದಿ ಅಧ್ಯಕ್ಷರಾಗಿ ಟಿ.ಎಂ ಶಹೀದ್ ತೆಕ್ಕಿಲ್ ಪುನರಾಯ್ಕೆಯಾಗಿದ್ದಾರೆ. 2006ರಲ್ಲಿ ಪೇರಡ್ಕ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ, ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಗೂನಡ್ಕ ಪೇರಡ್ಕ ಮದರಸ ಮಸೀದಿಯ
ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುತ್ತಾರೆ.
ಮಸೀದಿಯ ಗೌರವಾಧ್ಯಕ್ಷರಾಗಿ ಟಿ ಇ ಆರಿಫ್ ತೆಕ್ಕಿಲ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕೆ. ಉಮ್ಮರ್ ಗೂನಡ್ಕ , ಕೋಶಾಧಿಕಾರಿಯಾಗಿ ಪಿ.ಎ ಮಹಮ್ಮದ್ ಕುಂಞಿ ತೆಕ್ಕಿಲ್ ಪೇರಡ್ಕ , ಉಪಾಧ್ಯಕ್ಷರಾಗಿ ಟಿ.ಬಿ ಹನೀಫ್ ತೆಕ್ಕಿಲ್ ಹಾಗೂ ಜಿ.ಎಂ ಇಬ್ರಾಹಿಂ ಸೆಟ್ಯಡ್ಕ ಪೇರಡ್ಕ, ಜೊತೆ ಕಾರ್ಯದರ್ಶಿಗಳಾಗಿ ಕೆ.ಎಂ ಉಸ್ಮಾನ್ ಮತ್ತು ಪಿ.ಎ. ಸಿನಾನ್ ಗೂನಡ್ಕ, ನಿರ್ದೇಶಕರುಗಳಾಗಿ ಎಸ್ ಆಲಿ ಹಾಜಿ, ಪಾಂಡಿ ಅಬ್ಬಾಸ್, ಪಾಂಡಿ ಉಸ್ಮಾನ್, ಡಿ.ಎ. ಮೊಯಿದು, ಇಬ್ರಾಹಿಂ ಬಾತಿಷ ಸೆಟ್ಯಡ್ಕ, ಸಾಜಿದ್ ಐ ಜಿ ಗೂನಡ್ಕ ಮೊದಲಾದವರು ಕಾರ್ಯನಿರ್ವಹಿಸುತ್ತಿದ್ದಾರೆ.