ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ಮೋಹಿಯುದ್ದಿನ್ ಜುಮಾ ಮಸೀದಿ ನವೀಕರಣಕ್ಕೆ ಕರ್ನಾಟಕ ಸರಕಾರದ ವಖ್ಫ್ ಇಲಾಖೆಯಿಂದ ವಸತಿ ಹಾಗು ವಖ್ಫ್ ಸಚಿವರಾದ ಜಮೀರ್ ಅಹಮದ್ ಖಾನ್ ಅವರು ಐದು ಲಕ್ಷ ರೂ.ಮಂಜೂರು ಮಾಡಿದ್ದಾರೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ ಆರ್ ಡಿ ಎ ಗೂನಡ್ಕ ಇದರ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ ತಿಳಿಸಿದ್ದಾರೆ. ಮಸೀದಿಯ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ಮನವಿಯ ಮೇರೆಗೆ ಅನುದಾನ ಬಿಡುಗಡೆಯಾಗಿದೆ.