ಪೇರಡ್ಕ: ತೆಕ್ಕಿಲ್ ಮಹಮ್ಮದ್ ಹಾಜಿ ಮೆಮೋರಿಯಲ್ ತಕ್ವೀಯತುಲ್ ಇಸ್ಲಾಂ ಮದರಸ ಪೇರಡ್ಕ ಗೂನಡ್ಕ ಸಂಪಾಜೆ , ಮೋಹಿಯುದ್ದಿನ್ ಜುಮಾ ಮಸ್ಜಿದ್ ಪೇರಡ್ಕ ಗೂನಡ್ಕ ಸಂಪಾಜೆ ಇವುಗಳ ಜಂಟಿ ಆಶ್ರಯದಲ್ಲಿ ಈದ್ ಮಿಲಾದ್ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಕಲಾಸಾಹಿತ್ಯ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ದುವಾ ಮೂಲಕ ಖತೀಬರಾದ ಅಲ್ ಹಾಜ್ ರಿಯಾಸ್ ಫೈಝಿ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು
ಜಮಾಅತ್ ಅಧ್ಯಕ್ಷ ಆಲಿ ಹಾಜಿ ವಹಿಸಿದ್ದರು. ಮದರಸ ಸದರ್ ನೂರುದ್ದಿನ್ ಅನ್ಸಾರಿ , ಸಹಾಯಕ ಅಧ್ಯಾಪಾಕ ಹಂಸ ಮುಸ್ಲಿಯರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಆಲಿ ಹಾಜಿ ಧ್ವಜಹರೋಹಣ ನೆರವೇರಿಸಿದರು. ನಂತರ ಪೇರಡ್ಕ ವಳಿಯುಲ್ಲಾಹಿ ದರ್ಗಾ ಶರೀಫ್ ವರೆಗೆ ಮೆರವಣಿಗೆ ಹಾಗೂ ದಫ್ ಪ್ರದರ್ಶನ ಏರ್ಪಡಿಸಗಿತ್ತು, ಮಸ್ಜಿದ್ ಗೌರವ ಅಧ್ಯಕ್ಷ,ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಂಡಿ ಅಬ್ಬಾಸ್,ಉಪಾಧ್ಯಕ್ಷ ಸಾಜೀದ್ ಆಜ್ಹಹರಿ, ಜಮಾಅತ್ ಕಾರ್ಯದರ್ಶಿ ರಜಾಕ್ ಹಾಜಿ, ಖಜಾಂಜಿ ಪಿ ಕೆ ಉಮ್ಮರ್ ಗೂನಡ್ಕ , ಎಸ್ ಕೆ ಎಸ್ ಎಸ್ ಎಫ್ ನ ಮುನೀರ್ ಧಾರಿಮಿ,ತೆಕ್ಕಿಲ್ ಮೊಹಮ್ಮದ್ ಕುಂಞಿ ಪೇರಡ್ಕ, ಇಬ್ರಾಹಿಂ ಹಾಜಿ ಕರಾವಳಿ, ಇಬ್ರಾಹಿಂ ಶೆಟ್ಟಿಯಡ್ಕ, ರಝಾಕ್ ಅಡಿಮರಡ್ಕ, ರಝಾಕ್ ಗೂನಡ್ಕ ಮತ್ತಿತರರು ಭಾಗವಹಿಸಿದರು.