ಸುಬ್ರಹ್ಮಣ್ಯ:ಎಸ್ ಎಸ್ ಪಿಯು ಕಾಲೇಜಿನಲ್ಲಿ ಎನ್ ಎಸ್ ಎಸ್, ರೋವರ್ ರೇಂಜರ್ಸ್, ರೆಡ್ ಕ್ರಾಸ್ ವತಿಯಿಂದ ಪರಿಸರ ದಿನಾಚರಣೆ ನಡೆಯಿತು.ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಂ.ಎಸ್ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿ ಗಳಿಗೆ ಸಸಿ ವಿತರಿಸಿ ಪರಿಸರ ಸಂರಕ್ಷಣೆ
ಕುರಿತು ಜಾಗೃತಿ ಮಾತುಗಳನ್ನಾಡಿದರು.
ಬಳಿಕ ವಿದ್ಯಾರ್ಥಿಗಳು ಗಳು ಸಸಿಗಳನ್ನು ಕಾಲೇಜು ಆವರಣದಲ್ಲಿ ನೆಟ್ಟರು.
ಪ್ರಾಚಾರ್ಯ ಸೋಮಶೇಖರ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಎನ್ ಎಸ್ ಎಸ್ ಯೋಜನಾಧಿಕಾರಿಗಳಾದ ಭವ್ಯಶ್ರೀ ಕುಲ್ಕುಂದ, ಸುಧಾ, ರೋವರ್ಸ್ ಮತ್ತು ರೇಂಜರ್ಸ್ ನಾಯಕರಾದ ಸವಿತಾ ಕೈಲಾಸ್ ಮತ್ತು ಪ್ರವೀಣ್ ಎರ್ಮಾಯಿಲ್, ರೆಡ್ ಕ್ರಾಸ್ ಸಂಯೋಜಕಿ ಶೃತಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.