ಸುಳ್ಯ:ಸುಳ್ಯದ ಅಂಜಲಿ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಆಶ್ರಯದಲ್ಲಿ ನಡೆಸುತ್ತಿರುವ ಅಂಜಲಿ ಮೊಂಟೆಸ್ಸೋರಿ ಪ್ಲೇ ಸ್ಕೂಲ್ ವತಿಯಿಂದ ಪೋಷಕರ ಪುನಶ್ಚೇತನ ಕಾರ್ಯಾಗಾರ ಮಾ.12ರಂದು ಸುಳ್ಯದ ವರ್ತಕರ ಸಮುದಾಯ ಭವನದಲ್ಲಿ ನಡೆಯಿತು.
ಮೊಂಟೆಸ್ಸೋರಿ ಕಲಿಕಾ ಪದ್ಧತಿಯ ತತ್ವಶಾಸ್ತ್ರ ಹಾಗೂ ವಿಧಾನಗಳನ್ನು
ಪೋಷಕರಿಗೆ ತಿಳಿಸುವ ಉದ್ದೇಶದಿಂದ ಕಾರ್ಯಗಾರ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಮೊಂಟೆಸ್ಸೀರಿ ತರಬೇತುದಾರ ಇದ್ರೀಸ್ ಪಾಷಾ ಕಾರ್ಯಾಗಾರ ನಡೆಸಿ ಕೊಟ್ಟರು. ‘ಮಗುವಿನ ಸಮರ್ಪಕ ಕಲಿಕೆಯಲ್ಲಿ ಪೋಷಕರ ಪಾತ್ರ’ದ ಕುಂತಾಗಿ ಉಪನ್ಯಾಸ ನೀಡಿದ ಅವರು ಎಳವೆಯಲ್ಲಿಯೇ ಮಕ್ಕಳಲ್ಲಿ ಶಿಸ್ತು ಕಲಿಸಲು ಮೊಂಟೆಸ್ಸೋರಿ ಶಿಕ್ಷಣ

ಅತ್ಯಂತ ಪರಿಣಾಮಕಾರಿ. ಇದು ಅತ್ಯಂತ ಅಭಿವೃದ್ಧಿ ಹೊಂದಿದ ಶಿಕ್ಷಣ ಪದ್ಧತಿ ಎಂದು ಹೇಳಿದರು. ಮಕ್ಕಳಿಗೆ ಕಲಿಯಲು ಮತ್ತು ಬೆಳೆಯಲು ಉತ್ತಮ ವಾತಾವರಣವನ್ನು ಈ ಶಿಕ್ಷಣ ನೀಡುತ್ತದೆ ಎಂದು ಹೇಳಿದರು. ಮಗುವಿಗೆ ಗೌರವ ಮತ್ತು ಪ್ರೀತಿ ನೀಡುತ್ತಾ ಮಗುವನ್ನು ಬೆಳೆಸಬೇಕು. ಮೊಂಟೆಸ್ಸೋರಿ ಪ್ಲೇ ಹೋಮ್ನಲ್ಲಿ ಮಗು ಗೌರವಯುತವಾಗಿ ಬೆಳೆಯುತ್ತದೆ ಎಂದು ಅವರು ಹೇಳಿದರು.
ಶಿವಮೊಗ್ಗದ ಪೋದಾರ್ ಇಂಟರ್ನ್ಯಾಶನಲ್ ಶಾಲೆಯ ಪ್ರಾಂಶುಪಾಲ ಸುಕೇಶ ಸೇರಿಗಾರ್ “ಸಂತಸದ ಪೋಷಕತ್ವ’ದ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು.
ಅಂಜಲಿ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಕೆ.ಟಿ.ವಿಶ್ವನಾಥ ಕಾರ್ಯಾಗಾರವನ್ನು ಉದ್ಘಾಟಿಸಿದರು. ಸದಾನಂದ ಮಾವಜಿ ಮುಖ್ಯ ಅತಿಥಿಯಾಗಿದ್ದರು.ಅಂಜಲಿ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಶುಭಕರ ಬೊಳುಗಲ್ಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಅಂಜಲಿ ಮೋಂಟೆಸ್ಸೋರಿ ಪ್ಲೇ ಸ್ಕೂಲ್ನ ಸಂಚಾಲಕಿ ಗೀತಾಂಜಲಿ ಟಿ.ಜಿ. ವಂದಿಸಿದರು. ಅರ್ಚನಾ ಪ್ರಾರ್ಥಿಸಿದರು. ಕ್ಷಮಾ ಕುಳ ಕಾರ್ಯಕ್ರಮ ನಿರೂಪಿಸಿದರು.
