ಪಂಜ: ತಮ್ಮ ಊರಿನ ದೇವಾಲಯವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಪುಟಾಣಿಗಳ ಕಿರು ಸೇವೆ.ದೇವಸ್ಥಾನದಲ್ಲಿ ಪ್ರಸಾದ ವಿತರಿಸಲು ಪೇಪರ್ ಕವರ್ ತಯಾರಿಸಿ ನೀಡುವ ಮೂಲಕ ಈ ಮಕ್ಕಳು ದೇವಾಲಯವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಕೈ ಜೋಡಿಸಿದ್ದಾರೆ. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲ ಪ್ಲಾಸ್ಟಿಕ್ ಮುಕ್ತವಾಗಿಸುವ

ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಶ್ರೀಕ್ಷೇತ್ರದ ಮಕ್ಕಳ ಭಜನಾ ತಂಡದ ಮಕ್ಕಳು ತಾವು ಪೇಪರ್ನಲ್ಲಿ ತಯಾರಿಸಿದ ಕವರನ್ಮು ಪ್ರಸಾದ ವಿತರಿಸಲು ದೇವಸ್ಥಾನಕ್ಕೆ ನೀಡಿದರು.ಮಕ್ಕಳು ತಯಾರಿಸಿದ ಕಾಗದದ ಕವರ್ಗಳನ್ನು ದೇವಸ್ಥಾನಕ್ಕೆ ಹಸ್ತಾಂತರ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ದೇಗುಲದ ಅರ್ಚಕರಾದ ರಾಮಚಂದ್ರ ಭಟ್ ವಿಶೇಷ ಪ್ರಾರ್ಥನೆ ಮಾಡಿ ಪ್ರಸಾದ ನೀಡಿದರು.









