ಸುಳ್ಯ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಮಾ.1 ರಂದು ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರಿಗೆ ರಂಗಪೂಜೆ ಮತ್ತು ಬೀದಿನೇಮ ನಡೆಯಲಿದೆ. ಸಂಜೆ ಗಂಟೆ 6 ರಿಂದ ರಂಗಪೂಜೆ, ಕಾಚುಕುಜುಂಬ ದೈವದ ನರ್ತನ ಸೇವೆ,
ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 8 ರಿಂದ 9.30 ರ ತನಕ
ಉಳ್ಳಾಕುಲು ದೈವದ ನರ್ತನ ಸೇವೆ ನಡೆಯಲಿದೆ.ನಂತರ ಮಹಿಷಂತಾಯ, ವ್ಯಾಘ್ರ ಚಾಮುಂಡಿ, ಕುಪ್ಪೆ ಪಂಜುರ್ಲಿ,ವರ್ಣಾರ ಪಂಜುರ್ಲಿ,ಪುರುಷ ದೈವ, ಪೊಟ್ಟ ಭೂತ ಹಾಗೂ ಗುಳಿಗ ದೈವಗಳಿಗೆ ನರ್ತನ ಸೇವೆ ನಡೆಯಲಿದೆ.ಮಾ.2ರಂದು ರಾತ್ರಿ ಆದಿಬೈದೇರುಗಳ ನೇಮೋತ್ಸವ ನಡೆಯಲಿದೆ. ಸಂಜೆ 5-30ರಿಂದ ಮುಹೂರ್ತ ತೋರಣ,ರಾತ್ರಿ 8ರಿಂದ ಅನ್ನಸಂತರ್ಪಣೆ,ರಾತ್ರಿ 10 ರಿಂದ ಬೈದೇರುಗಳ ಗರಡಿ ಇಳಿಯುವುದು, ರಾತ್ರಿ 2 ರಿಂದ ಕಿನ್ನಿದಾರು ಗರಡಿ ಇಳಿದು ರಂಗ ಪ್ರವೇಶ ಬೆಳಿಗ್ಗೆ ಗಂಟೆ 5 ರಿಂದ ಪ್ರಸಾದ ವಿತರಣೆ ನಡೆಯಲಿದೆ.
ಮಾ.9 ರಂದು ಸಂಜೆ ಗಂಟೆ 5 ರಿಂದ ಜಾತ್ರೋತ್ಸವದ ಖರ್ಚು ವೆಚ್ಚಗಳ ಬಗ್ಗೆ ಸಾರ್ವಜನಿಕ ಸಭೆ ಪಾರ್ವತಿ ಸಭಾಭವನದಲ್ಲಿ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.








