ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆದ ನವರಾತ್ರಿ ಮಹೋತ್ಸವ ಸಂಪನ್ನಗೊಂಡಿತು. 10 ದಿನಗಳ ಕಾಲ ಬೆಳಿಗ್ಗೆ ಮಧ್ಯಾಹ್ನ, ರಾತ್ರಿ ಮಹಾಪೂಜೆ, ನಡೆಯಿತು. ಪ್ರತಿ ದಿನ
ಭಜನಾ ಸಂಕೀರ್ತನೆ, ಕಲಾ ಸೇವೆ ನಡೆಯಿತು. ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಮುಖರು ಸೇರಿ ಸಟವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ಅ.1ರಂದು ಯುವ ಸ್ಪೂರ್ತಿ ಕಲ್ಮಡ್ಕ ವತಿಯಿಂದ ಭಜನಾ ಸಂಕೀರ್ತನೆ, ಎ.ಕೆ.ಮೇಘನ್ ಅರ್ನೋಜಿಯವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಿತು. ಆಯುಧ ಪೂಜೆಯಲ್ಲಿ ನೂರಾರು ವಾಹನಗಳ ಪೂಜೆ ನಡೆಯಿತು.












