ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನವರಾತ್ರಿ ನವರಾತ್ರಿ ಮಹೋತ್ಸವ ಇಂದಿನಿಂದ (ಸೆ.22ರಿಂದ) ಅ. 1ರ ತನಕ ವೈಭವದಿಂದ
ನಡೆಯಲಿದೆ ಎಂದು ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್
ತಿಳಿಸಿದ್ದಾರೆ. ಪ್ರತಿ ದಿನ ಬೆಳಿಗ್ಗೆ 7.30ಕ್ಕೆ ಮಹಾಪೂಜೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 6.30 ರಿಂದ 7.45ರ ತನಕ ಭಜನಾ ಸಂಕೀರ್ತನೆ ರಾತ್ರಿ 8ಕ್ಕೆ ಮಹಾಪೂಜೆ, 8.10ರಿಂದ 8.30ರ ತನಕ
ಕಲಾ ಸೇವೆ ನಡೆಯಲಿದೆ. ಪ್ರತಿ ದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆಯಲಿದೆ.ಪ್ರತಿ ದಿನ ಸಂಜೆ 6.30ರಿಂದ 7.45ರ ತನಕ ಭಜನಾ ಸಂಕೀರ್ತನೆ ನಡೆಯಲಿದೆ.ಸೆ.22ರಂದು ವನಿತಾ ಸಮಾಜ ಪಂಜ,
ಸೆ.23ರಂದು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ, ಬೀದಿಗುಡ್ಡೆ, ಸೆ.24ರಂದು ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಸೆ.25ರಂದು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೇನ್ಯ, ಸೆ.26ರಂದು ಪಂಜ ವಲಯ ಹವ್ಯಕ ಮಹಿಳಾ ತಂಡ, ಸೆ.27
ಶ್ರೀ ವಿಷ್ಣು ಭಜನಾ ಮಂಡಳಿ ಅಳ್ಪೆ ಚಿಂಗಾಣಿಗುಡ್ಡೆ, ಸೆ.28 ರಂದು ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ, ಸೆ.29
ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ನಾಗತೀರ್ಥ, ಸೆ.30ರಂದು ಶಿವಳ್ಳಿ ಸಂಪದ ಪಂಜ ವಲಯ ಅ.1ರಂದು ಯುವ ಸ್ಫೂರ್ತಿ ಕಲ್ಮಡ್ಕ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಪ್ರತಿದಿನ ರಾತ್ರಿ 8.10ರಿಂದ ಕಲಾ ಸೇವೆ ನಡೆಯಲಿದೆ.ಸೆ.22ರಂದು ಮಾಸ್ಟರ್ ಪ್ರಕುಲ್ ತೋಟ ಇವರಿಂದ ತಬಲ ಮತ್ತು ಕೀಬೋರ್ಡ್ ವಾದನ, ಶ್ರೀಮತಿ ಗೀತ ಸುಧಾ ತೋಟ ಇವರಿಂದ ಭಕ್ತಿ ಗಾಯನ ನಡೆಯಲಿದೆ. ಸೆ.23ರಂದು ಶ್ರೀ ಶಾರದಾಂಬಾ ಮಕ್ಕಳ ಕುಣಿತ ಭಜನಾ ತಂಡ ನಾಗತೀರ್ಥ ಇವರಿಂದ ಕುಣಿತ ಭಜನೆ, ಸೆ.24ರಂದು
ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ ಪಂಜ ಇವರಿಂದ ಯಕ್ಷಗಾನ ಪ್ರದರ್ಶನ -‘ಕದಂಬ ಕೌಶಿಕೆ’
ಸೆ.25ರಂದು ಶ್ರೀ ಚಾಮುಂಡೇಶ್ವರಿ ಕುಣಿತ ಭಜನಾ ತಂಡ ಪಲ್ಲೋಡಿ, ಪಂಜ ಇವರಿಂದ’ಕುಣಿತ ಭಜನೆ’, ಸೆ.26ರಂದು ಶ್ರದ್ಧಾಲಕ್ಷ್ಮಿ ಮತ್ತು ಶ್ರಿಯಾಶಂಕರಿ ಇವರಿಂದ ‘ಭಕ್ತಿಗಾಯನ’, ಸೆ.27ರಂದು
ಸುಧಾ ಕೋಟೆ ಪಂಜ ಇವರಿಂದ ‘ಭಕ್ತಿ ಸುಧೆ’, ಸೆ.28ರಂದು ವಿದುಷಿ ಪೃಥ್ವಿ ಶೆಟ್ಟಿ ಮತ್ತು ಚರಿಷ್ಠಾ ರೈ ಪಲ್ಲೋಡಿ ಇದರಿಂದ ‘ಭರತನಾಟ್ಯ’ಸೆ.29ರಂದು
ಹೇಮಸ್ವಾತಿ ಕುರಿಯಾಜೆ ಮತ್ತು ತಂಡದವರಿಂದ ‘ಭರತನಾಟ್ಯ’ ಮತ್ತು ಯಕ್ಷಗಾನ ಭಾಗವತಿಕೆ,ಸೆ.30ರಂದು ವಿದುಷಿ ಮಾನಸ ಪುನೀತ್ ರೈ ಅವರ ಶಿಷ್ಯೆ ಆದ್ಯಾ ಬಾಬುಬೆಟ್ಟು ಮತ್ತು ಸ್ನೇಹ ಪಿ. ರಾವ್ ಇವರಿಂದ ‘ಭರತನಾಟ್ಯ ನೃತ್ಯ’ ಕಾರ್ಯಕ್ರಮ.ಅ.1ರಂದು
ಎ. ಕೆ. ಮೇಘನ್ ಆರ್ನೋಜಿ ಇವರಿಂದ ‘ಕೊಳಲು ವಾದನ’ ನಡೆಯಲಿದೆ.
ಯಕ್ಷಗಾನ ಬಯಲಾಟ:
ಸೆ.24ರಂದು ರಾತ್ರಿ 8ರಿಂದ ಶ್ರೀ ಶಾರದಾಂಬ ಯಕ್ಷಗಾನ ಟ್ರಸ್ಟ್ ಪಂಜ ಮಕ್ಕಳಿಂದ ದೇಗುಲದ ಪಾರ್ವತಿ ಸಭಾಭವನದಲ್ಲಿ
ಯಕ್ಷಗಾನ ಬಯಲಾಟ ‘ಕದಂಬ ಕೌಶಿಕೆ’ ನಡೆಯಲಿದೆ. ಭಾಗವತರಾಗಿ ಶ್ರೀ ಶಶಾಂಕ ಎಲಿಮಲೆ ಮತ್ತು ರಚನಾ ಚಿದ್ದಲ್, ಚೆಂಡೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ ಪಂಜ, ಮದ್ದಳೆಯಲ್ಲಿ ಹರೀಶ್ ರೈ ಇಚ್ಚಿಲಂಪಾಡಿ, ಚಕ್ರತಾಳದಲ್ಲಿ ಅಂಕುಶ್ ಎಣ್ಣೆಮಜಲು ಮತ್ತು ವಾಗೀಶ ಪಳ್ಳಿಗದ್ದೆ ಸಹಕರಿಸಲಿದ್ದಾರೆ.
ವಾಹನ ಪೂಜೆ:
ಅ.1ರಂದು ಬುಧವಾರ
ವಾಹನಪೂಜೆ ಪೂ.8.00ರಿಂದ ಮಧ್ಯಾಹ್ನ 1.30ರವರೆಗೆ ಮತ್ತು ಸಂಜೆ 5ರಿಂದ 9ರವರೆಗೆ ಹಾಗೂ ಉಳಿದ ದಿನಗಳಲ್ಲಿ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಮಹಾಪೂಜೆ ನಂತರ ನಡೆಯಲಿದೆ ಎಂದು ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.





