ಪಂಜ:ವನಿತಾ ಸಮಾಜ ಪಂಜ ಇದರ ಆಶ್ರಯದಲ್ಲಿ 60ನೇ ವರುಷದ ಸಂಭ್ರಮ ಮತ್ತು ದೀಪಾವಳಿ ಪ್ರಯುಕ್ತ 18 ವರುಷ ಮೇಲ್ಪಟ್ಟ ಮಹಿಳೆಯರಿಗೆ ಮುಕ್ತ ಲಗೋರಿ ಪಂದ್ಯಾಟ ಅ.27 ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ
ಪಂಜ ವನಿತಾ ಸಮಾಜ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ,ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಉತ್ತಮ ಸಂಸ್ಥೆ ಎಂದು ಹೇಳಿದರು.
ಲಗೋರಿ ಆಟಕ್ಕೆ ಬೇಕಾದ ಉತ್ತಮ ನಿಯಮಗಳನ್ನು ಆಳವಡಿಸಿ ಕೊಂಡು ವಿಶ್ವ ಮಟ್ಟಕ್ಕೆ ಲಗೋರಿ ಆಟ ಪರಿಚಯಿಸಿದ ಕೀರ್ತಿ ದೊಡ್ಡಣ್ಣ ಬರೆಮೇಲು ರವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿ ಲಗೋರಿ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಮಾತನಾಡಿ ಈ ಮಣ್ಣಿನಿಂದ ಆರಂಭಗೊಂಡ ಜಾನಪದ ಆಟ ಲಗೋರಿಗೆ ಈಗ ಉತ್ತಮ ಮನ್ನಣ್ಣೆ ದೊರಕಿದೆ. ಅದನ್ನು ಬೆಳೆಸಲು , ಆಯೋಜನೆಗೆ ರಾಷ್ಟ್ರಮಟ್ಟದಲ್ಲಿ ಫೆಡರೇಷನ್ ಮಾಡಿದ್ದೇವೆ ಎಂದು ಅವರು ಹೇಳಿದರು.
ವನಿತಾ ಸಮಾಜದ ಅಧ್ಯಕ್ಷೆ ಸುಮಾ ಕುದ್ವ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸುಳ್ಯ ತಾಲೂಕು ಮಹಿಳಾ ಮಂಡಲಗಳ
ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳೂರು, ವನಿತಾ ಸಮಾಜದ ನಿಕಟಪೂರ್ವಾಧ್ಯಕ್ಷೆ ಮಾಲಿನಿ ಕುದ್ವ, ಕಾರ್ಯದರ್ಶಿ ಸ್ವರ್ಣ ರೋಹಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇದೇ ವೇಳೆ ವನಿತಾ ಸಮಾಜದ ಪೂರ್ವಾಧ್ಯಕ್ಷರಗಳನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರಕಲಾ ಪ್ರಾರ್ಥಿಸಿದರು. ಸುಮಾ ಕುದ್ವ ಸ್ವಾಗತಿಸಿದರು. ಲತಾ ಮುಡೂರು, ತುಳಸಿ ಪ್ರಸಾದ್ ಚೀಮುಳ್ಳು , ಪವಿತ್ರ ಕುದ್ವ ಅತಿಥಿಗಳನ್ನು ಪರಿಚಯಿಸಿದರು. ಸ್ವರ್ಣ ರೋಹಿತ್ ವಂದಿಸಿದರು.ಬಳಿಕ 18 ವರುಷ ಮೇಲ್ಪಟ್ಟ ಮಹಿಳೆಯರಿಗೆ ಮುಕ್ತ ಲಗೋರಿ ಪಂದ್ಯಾಟ ಹಾಗೂ ವೈಯಕ್ತಿಕ ಆಟಗಳು ಜರುಗಿತು.