ಪಂಜ:ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏ.14 ರಂದು ಸೌರಮಾನ ಯುಗಾದಿ ವಿಶು ಹಬ್ಬದ ಪ್ರಯುಕ್ತ ವಿಶು ಕಣಿ ಪೂಜೆ ಜರುಗಿತು. ಭಕ್ತರು ದೇವಳದಲ್ಲಿ ವಿಶು ಕಣಿ ದರ್ಶನ ಪಡೆದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ವ್ಯವಸ್ಥಾಪನ ಸಮಿತಿ ಸದಸ್ಯರು ಹಾಗೂ
ಭಕ್ತಾದಿಗಳು ಉಪಸ್ಥಿತರಿದ್ದರು. ವಿಶು ಹಬ್ಬದ ಪ್ರಯುಕ್ತ ವಿಶು ಕಣಿ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.