ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮೇ.1 ರಂದು
ಪೂರ್ವಾಹ್ನ ಗಂಟೆ 10 ರಿಂದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶೀಘ್ರ ಮಳೆಗಾಗಿ ವಿಶೇಷ ಪೂಜೆ ಜರುಗಲಿದೆ. ಆ ಪ್ರಯುಕ್ತ
12 ಕಾಯಿ ಗಣಹವನ,ಆಶ್ಲೇಷ ಬಲಿ ಶತ ರುದ್ರಾಭಿಷೇಕ ,ಸೀಯಾಳ ಅಭಿಷೇಕ, ಕಲಶಾಭಿಷೇಕ ಸೇವೆ ಗಳೊಂದಿಗೆ ಶೀಘ್ರ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಸೀಯಾಳ ಅಭಿಷೇಕ ಹಾಗೂ ಶತರುದ್ರ ಅಭಿಷೇಕ ಸೇವೆಗೆ ಸೀಯಾಳ ಅಗತ್ಯವಿದ್ದು ಆದಷ್ಟು ಸೀಯಾಳ ವನ್ನೂ ಏ.30 ಒಳಗಾಗಿ ದೇವಳಕ್ಕೆ ತಲುಪಿಸ ಬೇಕಾಗಿ ವಿನಂತಿಸುತ್ತಿದ್ದೇವೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಕೃಪೆಗೆ ಪಾತ್ರರಾಗ ಬೇಕಾಗಿ ವಿನಂತಿಸುತ್ತಿದ್ದೇವೆ . ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.