ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ 9 ದಿನಗಳ ಕಾಲ ನಡೆಯುವ ನವರಾತ್ರಿ ನವರಾತ್ರಿ ಮಹೋತ್ಸವ ಸೆ.22ರಿಂದ ಆರಂಭಗೊಂಡಿದೆ. ಬೆಳಿಗ್ಗೆ, ಮಧ್ಯಾಹ್ನ, ಹಾಗೂ
ರಾತ್ರಿ ಮಹಾಪೂಜೆ ನಡೆಯಿತು. ಸಂಜೆ ಭಜನಾ ಸಂಕೀರ್ತನೆ ನಡೆಯಿತು.
ಸೆ.22ರಂದು ವನಿತಾ ಸಮಾಜ ಪಂಜದ ಸದಸ್ಯರು ಭಜನಾ ಸಂಕೀರ್ತನೆ ಪ್ರಸ್ತುತಪಡಿಸಿದರು.ಬಳಿಕ ಕಲಾ ಸೇವೆ ನಡೆಯಿತು. ಮಾಸ್ಟರ್ ಪ್ರಕುಲ್ ತೋಟ ಇವರಿಂದ ತಬಲ ಮತ್ತು ಕೀಬೋರ್ಡ್ ವಾದನ, ಶ್ರೀಮತಿ ಗೀತ ಸುಧಾ ತೋಟ ಇವರಿಂದ ಭಕ್ತಿ ಗಾಯನ ನಡೆಯಿತು.

ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್
ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಇಂದಿನ ಕಾರ್ಯಕ್ರಮ:
ಇಂದು(ಸೆ.23ರಂದು) ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ, ಬೀದಿಗುಡ್ಡೆ, ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ರಾತ್ರಿ ಕಲಾ ಸೇವೆಯಲ್ಲಿ ಶ್ರೀ ಶಾರದಾಂಬಾ ಮಕ್ಕಳ ಕುಣಿತ ಭಜನಾ ತಂಡ ನಾಗತೀರ್ಥ ಇವರಿಂದ ಕುಣಿತ ಭಜನೆ ನಡೆಯಲಿದೆ.






