ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ದಿನಾವದ ಆ.27 ರಂದು ಕದಿರು ವಿತರಣೆ, ಅಪ್ಪಕಜ್ಜಾಯ ಮತ್ತು ನವಾನ್ನ ಭೋಜನ ಮತ್ತಿತರ ವಿಶೇಷ ಕಾರ್ಯಕ್ರಮಗಳು ಜರುಗಿತು.ಶ್ರೀ ದೇಗುಲದ ಕದಿರು ಗದ್ದೆಯಿಂದ ಕದಿರನ್ನು ಅರ್ಚಕರು ಶಂಖ ಜಾಗಟೆ ಮುಖಾಂತರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ
ಸದಸ್ಯರು ಮತ್ತು ಭಕ್ತರು ಮೆರವಣಿಗೆಯ ಮೂಲಕ ದೇಗುಲಕ್ಕೆ ತಂದು ಸಾನಿಧ್ಯಗಳಲ್ಲಿ ಹೊಸ್ತಾರೋಹಣ ಆಗಿ ಮಹಾಪೂಜೆಯಾಗಿ ಭಕ್ತಾದಿಗಳಿಗೆ ಕದಿರು ವಿತರಿಸಲಾಯಿತು. ದೇವಳದಲ್ಲಿ ಶ್ರೀ ಮಹಾಗಣಪತಿ ಹವನ ಮತ್ತು ಶ್ರೀ ದೇವರಿಗೆ ನವಾನ್ನ ಮಹಾ ನೈವೇದ್ಯ ಸಮರ್ಪಣೆ ಮಾಡಿ ಮಹಾಪೂಜೆಯ ಬಳಿಕ ಭಕ್ತರಿಗೆ ಕದಿರು, ತೀರ್ಥ ಪ್ರಸಾದ, ಸೇವಾ ಪ್ರಸಾದ, ಅಪ್ಪಕಜ್ಜಾಯ ವಿತರಣೆ ಮಾಡಲಾಯಿತು. ಮಕ್ಕಳಿಗೆ ವಿದ್ಯಾರಂಭ ಅನ್ನಪ್ರಾಶನ , ನವಾನ್ನ ಭೋಜನ ನಡೆಯಿತು.

ಸಾವಿರಾರು ಮಂದಿ ಭಕ್ತರು ನವಾನ್ನ ಭೋಜನ ಸ್ವೀಕರಿಸಿದರು.ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ , ಸದಸ್ಯರಾದ ಸಂತೋಷ್ ಕುಮಾರ್ ರೈ, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕ್ಕಡ, ಮಾಯಿಲಪ್ಪ ಗೌಡ ಎಣ್ಮೂರು, ಮಾಲಿನಿ ಕುದ್ವ, ಪವಿತ್ರಾ ಮಲ್ಲೆಟ್ಟಿ, ಪಂಚಶ್ರೀ ಜೇಸಿಸ್ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಮತ್ತಿತರರು ಉಪಸ್ಥಿತರಿದ್ದರು.












