ಪಂಜ: ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಜ.24ರಂದು ಮುಹೂರ್ತ ವಿವಿಧ ವೈಧಿಕ ಕಾರ್ಯಮಗಳೊಂದಿಗೆ ನಡೆಯಿತು. ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಮೀಪದ ತೋಟದಲ್ಲಿ ಗೊನೆ ಕಡಿಯುವ ಮೂಲಕ
ಗೊನೆ ಮುಹೂರ್ತ ನೆರವೇರಿಸಲಾಯಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಕಾಚಿಲ, ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಮಾಯಿಲಪ್ಪ ಗೌಡ ಎಣ್ಮೂರು, ಪವಿತ್ರಾ ಮಲ್ಲೇಟ್ಟಿ, ಮಾಲಿನಿ ಕುದ್ವ, ಗೌರವ ಸಲಹೆಗಾರರಾದ ಪರಮೇಶ್ವರ ಬಿಳಿಮಲೆ, ವ್ಯವಸ್ಥಾಪನಾ

ಸಮಿತಿ ಮಾಜಿ ಅಧ್ಯಕ್ಷರಾದ ಪದ್ಮನಾಭ ರೈ ಅಗೋಳಿಬೈಲುಗುತ್ತು, ಮಾಜಿ ಸದಸ್ಯರಾದ ಬಾಲಕೃಷ್ಣ ಗೌಡ ಕುದ್ವ, ಮೋನಪ್ಪ ನಾಯ್ಕ ಸೌಧಾಮಿನಿ ಹಾಗೂ ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಜ.24 ರಿಂದ ಫೆ.9 ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ದೇವಾಲಯದ ಜಾತ್ರೋತ್ಸವ ನಡೆಯಲಿದೆ.
ಫೆ.1ರಂದು ರಾತ್ರಿ ಧ್ವಜಾರೋಹಣ , ಫೆ.5 ರಂದು ಹಗಲು ದರ್ಶನ ಬಲಿ, ಫೆ.6 ರಂದು ರಾತ್ರಿ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದರು.













