ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಹಸಿರು ವಾಣಿ ಸಮರ್ಪಣೆ ಮಾಡಲಾಯಿತು.ವೈಭವದ ಮೆರವಣಿಗೆ ಮೂಲಕ ಹಸಿರು ಕಾಣಿಕೆ ಸಮರ್ಪಣೆ ಮಾಡಲಾಯಿತು.ಪೂರ್ವಾಹ್ನ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಹಸಿರು ಕಾಣಿಕೆ ಸಂಗ್ರಹಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ ಅನ್ನಸಂತರ್ಪಣೆ ನಡೆಯಿತು. ಮುಂಜಾನೆಯಿಂದ
ಪಂಜ ಸೀಮೆಯ ಅನೇಕ ಊರುಗಳಲ್ಲಿ ಹಸಿರು ಕಾಣಿಕೆ ಸಂಗ್ರಹಿಸಿ ಸಂಜೆ ಪುತ್ಯ ಸತ್ಯ ಕಟ್ಟೆಯಲ್ಲಿ ಪ್ರಾರ್ಥಿಸಿ ಹಸಿರು ಕಾಣಿಕೆ ವೈಭವದ ಮೆರವಣಿಗೆ ಸಾಗಿ ದೇವಳಕ್ಕೆ ಸಮರ್ಪಣೆ ಗೊಂಡಿತ್ತು. ಮೆರವಣಿಗೆಯಲ್ಲಿ ಬ್ಯಾಂಡ್ ವಾಲಗ, ಗೊಂಬೆ ತಂಡ, ವಾಹನಗಳು ವಿಶೇಷ ಆಕರ್ಷಣೆಯಾಗಿತ್ತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ

ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಾಯಿಲಪ್ಪ ಗೌಡ ಎಣ್ಮೂರು, ಧರ್ಮಣ್ಣ ನಾಯ್ಕ ಗರಡಿ, ಸಂತೋಷ್ ಕುಮಾರ್ ರೈ ಬಳ್ಪ, ಧರ್ಮಪಾಲ ಮರಕ್ಕಡ, ಸತ್ಯನಾರಾಯಣ ಭಟ್ ಕಾಯಂಬಾಡಿ, ರಾಮಚಂದ್ರ ಭಟ್, ಮಾಲಿನಿ ಕುದ್ವ, ಪವಿತ್ರ ಮಲ್ಲೆಟಿ, ಸಲಹಾ ಸಮಿತಿಯವರು, ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲು ಗುತ್ತು, ಪೈಂದೋಡಿ ಶ್ರೀ ಸುಬ್ರಾಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಹಸಿರು ಕಾಣಿಕೆ ಸಂಗ್ರಹಣಾ ಸಂಚಾಲಕರಾದ ಸಂತೋಷ್ ರೈ ಬಳ್ಪ, ಶರತ್ ಕುದ್ವ, ಪವನ್ ಪಲ್ಲತ್ತಡ್ಕ, ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು. ಸತ್ಯ(ಪುತ್ಯ) ಕಟ್ಟೆಗೆ ಪೂಜೆ ಸಲ್ಲಿಸಿ ದೈವ ಮಧ್ಯಸ್ಥರಾದ ತಿಮ್ಮಪ್ಪಗೌಡ ಪುತ್ಯ ಪ್ರಾರ್ಥಿಸಿದರು. ಬಳಿಕ ತೆಂಗಿನ ಕಾಯಿ ಒಡೆದು ಮೆರವಣಿಗೆ ಆರಂಭ ಗೊಂಡಿತ್ತು.
ಸಂಜೆ ಉಗ್ರಾಣ ತುಂಬಿಸುವುದು. ಮಹಾಪೂಜೆ ದಂಡಮಾಲೆ ಹಾಕಿ ಬಲಿ ಹೊರಡುವುದು, ಬೇತಾಳಗಳು ಇಳಿಯುವುದು, ಅನ್ನಸಂತರ್ಪಣೆ ನಡೆಯಿತು.





