ಸುಳ್ಯ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಜಾತ್ರೋತ್ಸವಕ್ಕೆ ಜ.24 ಶನಿವಾರ ದಂದು ಮುಂಜಾನೆ 10 ರಿಂದ ಆಂಗಡಿ ಸ್ಥಳ ಬಹಿರಂಗ ಏಲಂ ನಡೆಯಲಿದೆ.ಮಧ್ಯಾಹ್ನ ಗಂಟೆ 3ಕ್ಕೆ
ಲೈಟಿಂಗ್ಸ್- ಸೌಂಡ್ಸ್, ಶಾಮಿಯಾನ , ದಿನಸಿ ಸಾಮಗ್ರಿಗಳಿಗೆ ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗಿದೆ. ಟೆಂಡರ್ ಪಾಲ್ಗೊಳ್ಳುವವರು ಮುಚ್ಚಿದ ಲಕೋಟೆಯಲ್ಲಿ ಟೆಂಡರ್ ಅರ್ಜಿ ನೀಡುವುದು.ಬಳಿಕ ಟೆಂಡರ್ ದಾರರ ಸಮಕ್ಷಮದಲ್ಲಿ 3.30ಕ್ಕೆ ಟೆಂಡರ್ ಅರ್ಜಿ ತೆರೆಯಲಾಗುತ್ತದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












