ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.5ರಂದು ಶ್ರೀ ದೇವರ ದರ್ಶನ ಉತ್ಸವ ಭಕ್ತಿ ಸಂಭ್ರಮದಿಂದ ನಡೆಯಿತು.ಪೂರ್ವಾಹ್ನ ಶ್ರೀ ದೇವರ ಬಲಿ ಹೊರಟು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಶ್ರೀ ದೇವಳದಲ್ಲಿ

ನಡೆದ ದರ್ಶನ ಬಲಿಯಲ್ಲಿ ವೇದ ಮಂತ್ರ ಘೋಷ ,ಸ್ಯಾಕ್ಸೋಫೋನ್, ಚೆಂಡೆ , ಬ್ಯಾಂಡ್, ವಾಲಗ ,ಗೊಂಬೆಗಳು ಮೆರುಗು ನೀಡಿದವು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷರಾದ ಡಾ.ರಾಮಯ್ಯ ಭಟ್, ಪದ್ಮನಾಭ ರೈ ಅಗೋಳಿಬೈಲು ಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸತ್ಯನಾರಾಯಣ ಭಟ್ ಕಾಯಂಬಾಡಿ, ರಾಮಚಂದ್ರ ಭಟ್, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕ್ಕಡ, ಮಾಯಿಲಪ್ಪ ಗೌಡ ಪಟ್ಟೆ ಎಣ್ಮೂರು , ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ ಬಳ್ಪ, ಮಾಲಿನಿ ಕುದ್ವ, ಪವಿತ್ರ ಮಲ್ಲೆಟಿ, ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್, ಜಿಲ್ಲಾ

ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ್ ಗಬ್ಲಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಜಳಕದಹೊಳೆ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ, ಕಂಬಳ,ಪರಮೇಶ್ವರ ಬಿಳಿಮಲೆ ಉದಯ ಕುಮಾರ್ ಬೆಟ್ಟ, ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.
ದೇವಳದಲ್ಲಿ ಇಂದು ರಾತ್ರಿ ದೀಪೋತ್ಸವ,ಮಹಾಪೂಜೆ, ಶ್ರೀ ದೇವರ ಉತ್ಸವ, ಬೀದಿಕಟ್ಟೆ ಪೂಜೆ, ಕಾಚುಕುಜುಂಬ, ಶಿರಾಡಿ, ರುದ್ರಚಾಮುಂಡಿ ದೈವಗಳ ನರ್ತನ ಸೇವೆ, ವಸಂತ ಕಟ್ಟೆಪೂಜೆ, ಶ್ರೀ ದೇವರ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಫೆ.5 ರಂದು ಸಂಜೆ ಗಂಟೆ 7 ರಿಂದ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಜೀವನ್ ಬೆಳ್ಳಾರೆ ನಿರ್ದೇಶನದ ಡಾನ್ಸ್ ಅಂಡ್ ಬೀಟ್ಸ್ ಪಂಜ, ಬೆಳ್ಳಾರೆ, ಕೈಕಂಬ,ಸುಬ್ರಹ್ಮಣ್ಯ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ನಡೆಯಲಿದೆ.








