ಪಂಜ:ಸ್ವಚ್ಛ ದೇಗುಲ ಕಾರ್ಯಕ್ರಮದಡಿಯಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕೂತ್ಕುಂಜ ಒಕ್ಕೂಟ ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕ ಪಂಜ ವಲಯ ಇದರ ವತಿಯಿಂದ
ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಸೇವಾ ಪ್ರತಿನಿಧಿ ರೋಹಿಣಿ ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು ಮತ್ತು ಸದಸ್ಯರಾದ ಧರ್ಮಣ್ಣ ನಾಯ್ಕ ಗರಡಿ ಅವರು ಉಪಸ್ಥಿತರಿದ್ದರು. ದೇಗುಲದ ಅರ್ಚಕ ರಾಮಚಂದ್ರ ಭಟ್ ರವರು ಪ್ರಾರ್ಥನೆ ಮಾಡಿ ಶ್ರೀ ದೇವರ ಪ್ರಸಾದ ನೀಡಿದರು.





