ಪಂಜ: ಮಹಾಶಿವರಾತ್ರಿ ಪ್ರಯುಕ್ತ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಿಂದ ಭಕ್ತರು ಪಂಜ ಸೀಮೆ ದೇವಸ್ಥಾನ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡರು. ಫೆ .26 ರಂದು ಮಹಾಶಿವರಾತ್ರಿ ಆಚರಣೆ ವಿವಿಧ ವೈಧಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ
ಚಾರ್ವಾಕ,ಕಾಣಿಯೂರು, ಪುಣ್ಚತ್ತಾರು,ನಿಂತಿಕಲ್, ಪಡ್ಪಿನಂಗಡಿ, ನಿಡ್ವಾಳ,ಪಂಜ ಮಾರ್ಗದಲ್ಲಿ ಭಕ್ತರು ಪಾದಯಾತ್ರೆ ನಡೆಸಿ ಕ್ಷೇತ್ರಕ್ಕೆ ಆಗಮಿಸಿದರು. ಅವರಿಗೆ ಪಂಜ ಪೇಟೆ ದ್ವಾರದ ಬಳಿ ಸ್ವಾಗತ ಕೋರಲಾಯಿತು. ಬಳಿಕ ದ್ವಾರದ ಬಳಿಯಲ್ಲಿ ಸ್ವಾಗತಿಸಿ ಅವರೊಂದಿಗೆ ಶ್ರೀ ದೇಗುಲಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದರು.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮೀ ಜಳಕದಹೊಳೆ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಬಲಡ್ಕ,
ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಮುಖರು, ಭಕ್ತಾದಿಗಳು ಉಪಸ್ಥಿತರಿದ್ದರು.ಬಳಿಕ ದೇಗುಲದಲ್ಲಿ ಪಾದಯಾತ್ರಿಗಳು ಪ್ರಾರ್ಥನೆ ಸಲ್ಲಿಸಿ ಮಧ್ಯಾಹ್ನ ಅನ್ನ ಪ್ರಸಾದ ಸ್ವೀಕರಿಸಿ ತೆರಳಿದರು.