ಪಂಜ: ಜೇಸಿಐ ಪಂಜ ಪಂಚಶ್ರೀಯ 25 ನೇ ವರ್ಷಾಚರಣೆ ‘ರಜತ ರಶ್ಮಿ’ ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ. ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆದ
ಕಾರ್ಯಕ್ರಮವನ್ನು ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ್ ದಾಮ್ಲೆ ಉದ್ಘಾಟಿಸಿದರು. ಜೇಸಿ ಸಂಸ್ಥೆ ಯುವ ಜನರ ಬೆಳವಣಿಗೆಗಾಗಿ ಬೆಳೆದು ಬಂದ ಅಂತರಾಷ್ಟ್ರೀಯ ಸಂಸ್ಥೆ. ಜೇಸಿಐ ಪಂಜ ಪಂಚಶ್ರೀ ಜೇಸಿಯ ಉದ್ದೇಶವನ್ನು ಅಕ್ಷರಷಃ ಅನುಷ್ಠಾನ ಗೊಳಿಸಿದೆ ಎಂದು ಹೇಳಿದರು. ತಾರಾಲಯವನ್ನು ಉದ್ಘಾಟಿಸಿ
ಉಪನ್ಯಾಸ ನೀಡಿದ ಅವರು ಮಕ್ಕಳಿಗೆ ಆಕಾಶ ವಿಸ್ಮಯಗಳನ್ನು ವೀಕ್ಷಣೆ ಮಾಡಲು ಪ್ರೇರಣೆ ನೀಡಬೇಕು. ಆಕಾಶದಲ್ಲಿ ನಕ್ಷತ್ರಗಳು, ಗ್ರಹಗಳ ವೀಕ್ಷಣೆ, ಮೋಡಗಳ ಓಟ, ಅಲ್ಲಿ ಮೂಡುವ ಬೇರೆ ಬೇರೆ ರೂಪ, ಚಿತ್ರಗಳನ್ನು ಕಣ್ತುಂಬಿಕೊಳ್ಳಬೇಕು.ಅಂತಹ ಶಿಕ್ಷಣ ಅಗತ್ಯವಿದೆ.ಆಕಾಶ ಎನ್ನುವುದು ನಿಜವಾದ . ಖಗೋಳಜ್ಞಾನಿಗಳು ,
ಜ್ಯೋತಿಷ್ಯಜ್ಞಾನಿಗಳು ಅವುಗಳಲ್ಲಿ ನಡೆಯುವ ಬದಲಾವಣೆಗಳನ್ನು ತಿಳಿಸುತ್ತವೆ ಎಂದು ಅವರು ಹೇಳಿದರು. ಮುಖ್ಯ ಅತಿಥಿ
ಪ್ರಾಂತ್ಯ’ಸಿ’ ವಲಯ 15ರ ಉಪಾಧ್ಯಕ್ಷ ರವಿಚಂದ್ರ ಪಾಟಾಳಿ ಮಾತನಾಡಿ
“ಜೇಸಿಐ ಪಂಜ ಪಂಚಶ್ರೀ ಉತ್ತಮ ಕ್ರಿಯಾಶೀಲ ಘಟಕವಾಗಿದೆ. ರಜತ ರಶ್ಮಿ ಕಾರ್ಯಕ್ರಮ ಯಶಸ್ವಿಯಾಗಲಿ.ಘಟಕವು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.

ಝೂ ಪೆಟ್ ಶೋ ಉದ್ಘಾಟನೆ:
ಬಲು ಅಪರೂಪದ ಸಾಕು ಪ್ರಾಣಿಗಳು, ಪಕ್ಷಿಗಳು, ಮೀನುಗಳು ಪ್ರದರ್ಶನ ‘ಝೂ ಪೆಟ್ ಶೋ’ ವನ್ನು ವಲಯ 15ರ ಉಪಾಧ್ಯಕ್ಷ ರವಿಚಂದ್ರ ಪಾಟಾಳಿ ಪಾರಿವಾಳಗಳನ್ನು ಹಾರಿಸಿ ಉದ್ಘಾಟಿಸಿದರು. ನ.7 ರಿಂದ ನ.9ರ ತನಕ ಪ್ರದರ್ಶನ ಜರುಗಲಿದೆ. ತಾರಾಲಯ ‘ಬೆಳ್ಳಿ ತಾರೆ’ ನಕ್ಷತ್ರ ಲೋಕದಲ್ಲೊಂದು ಸುತ್ತು’ ಪ್ರದರ್ಶನವನ್ನು
ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆ ಸಂಚಾಲಕ ಡಾ. ಚಂದ್ರಶೇಖರ್ ದಾಮ್ಲೆ ಉದ್ಘಾಟಿಸಿದರು. ಪ್ರದರ್ಶನ ನ.7ಮತ್ತು ನ.8 ರಂದು ನಡೆಯಲಿದೆ.
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಸಭಾಧ್ಯಕ್ಷತೆ ವಹಿಸಿದ್ದರು.
ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಮತ್ತು ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಸಮಿತಿಯ ಕಾರ್ಯದರ್ಶಿ ತೀರ್ಥಾನಂದ ಕೊಡೆಂಕಿರಿ, ಕಾರ್ಯಕ್ರಮ ನಿರ್ದೇಶಕ ಲೋಕೇಶ್ ಆಕ್ರಿಕಟ್ಟೆ, ನಿಕಟಪೂರ್ವ ಅಧ್ಯಕ್ಷ ಗಣೇಶ್ ಪ್ರಸಾದ್ ಭೀಮಗುಳಿ, ಕಾರ್ಯದರ್ಶಿ ಕೌಶಿಕ್ ಕುಳ ,ಝೂ ಪೆಟ್ ಶೋ ಕಾರ್ಯಕ್ರಮ ಸಂಯೋಜಕ ನಿಶಿತ್ ಮುಂಡೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಜೇಶ್ ಕಂಬಳ ವೇದಿಕೆಗೆಗೆ ಆಹ್ವಾನಿಸಿದರು.
ರಕ್ಷಿತ್ ಗೋಳಿಕಟ್ಟೆ ಜೇಸಿ ವಾಣಿ ನುಡಿದರು.ದೇವಿಪ್ರಸಾದ್ ಜಾಕೆ ಸ್ವಾಗತಿಸಿ ಪ್ರಸ್ತಾವನೆಗೈದರು. ತೀರ್ಥಾನಂದ ಕೊಡೆಂಕಿರಿ , ಚಂದ್ರಶೇಖರ ಕುಕ್ಕುಪುಣಿ ಅತಿಥಿಗಳನ್ನು ಪರಿಚಯಿಸಿದರು.ಕೌಶಿಕ್ ಕುಳ ವಂದಿಸಿದರು.