ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಅಂಗವಾಗಿ ಆರನೇ ದಿನವಾದ ಸೆ.27ರಂದು ಬೆಳಿಗ್ಗೆ ಮಧ್ಯಾಹ್ನ, ರಾತ್ರಿ ಮಹಾಪೂಜೆ, ನಡೆಯಿತು. ಸಂಜೆ ಭಜನಾ ಸಂಕೀರ್ತನೆ, ರಾತ್ರಿಕಲಾ ಸೇವೆ ನಡೆಯಿತು. ಶ್ರೀ ಪರಿವಾರ

ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.ಶ್ರೀ ವಿಷ್ಣು ಭಜನಾ ಮಂಡಳಿ ಅಳ್ಪೆ ಚಿಂಗಾಣಿಗುಡ್ಡೆ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಕಲಾ ಸೇವೆಯಲ್ಲಿ ಸುಧಾ ಕೋಟೆ ಪಂಜ ಇವರಿಂದ ‘ಭಕ್ತಿ ಸುಧೆ’ ನಡೆಯಿಯು.
ಇಂದು (ಸೆ.28ರಂದು)ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಕಲಾ ಸೇವೆಯಲ್ಲಿ ವಿದುಷಿ ಪೃಥ್ವಿ ಶೆಟ್ಟಿ ಮತ್ತು ಚರಿಷ್ಠಾ ರೈ ಪಲ್ಲೋಡಿ ಇದರು ‘ಭರತನಾಟ್ಯ’ ಪ್ರಸ್ತುತಿಪಡಿಸಲಿದ್ದಾರೆ.





