ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಅಂಗವಾಗಿ ಏಳನೇ ದಿನವಾದ ಸೆ.28ರಂದು ಬೆಳಿಗ್ಗೆ ಮಧ್ಯಾಹ್ನ, ರಾತ್ರಿ ಮಹಾಪೂಜೆ, ನಡೆಯಿತು. ಸಂಜೆ ಭಜನಾ ಸಂಕೀರ್ತನೆ, ರಾತ್ರಿಕಲಾ ಸೇವೆ ನಡೆಯಿತು. ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಮುಖರು, ಭಕ್ತರು ಉಪಸ್ಥಿತರಿದ್ದರು.ಪಂಚಶ್ರೀ ಭಜನಾ ಮಂಡಳಿ ಪಂಬೆತ್ತಾಡಿ ಇವರಿಂದ ಭಜನಾ ಸಂಕೀರ್ತನೆ, ಕಲಾ ಸೇವೆಯಲ್ಲಿ ವಿದುಷಿ ಪೃಥ್ವಿ ಶೆಟ್ಟಿ ಮತ್ತು ಚರಿಷ್ಠಾ ರೈ ಪಲ್ಲೋಡಿ ಇದರು ‘ಭರತನಾಟ್ಯ’ ಪ್ರಸ್ತುತಿಪಡಿಸಿದರು.
ಇಂದಿನ ಕಾರ್ಯಕ್ರಮ:
ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ನಾಗತೀರ್ಥ ಅವರಿಂದ ಭಜನಾ ಸಂಕೀರ್ತನೆ. ಕಲಾಸೇವೆಯಲ್ಲಿ ಹೇಮಸ್ವಾತಿ ಕುರಿಯಾಜೆ ಮತ್ತು ತಂಡದವರಿಂದ ಭರತನಾಟ್ಯ ಮತ್ತು ಯಕ್ಷಗಾನ ಭಾಗವತಿಕೆ ನಡೆಯಲಿದೆ.
ಆಯುಧ ಪೂಜೆ:
ಅ.1ರಂದು ಆಯುಧ ಪೂಜೆ ಮತ್ತು ವಾಹನ ಪೂಜೆ ಪೂ.8ರಿಂದ 2.30 ತನಕ ಹಾಗೂ ಸಂಜೆ 5ರಿಂದ 9.30ರವರೆಗೆ ನಡೆಯಲಿದೆ. ಉಳಿದ ದಿನಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಪೂಜೆಯ ಬಳಿಕ ನಡೆಯಲಿದೆ.





