ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವದ ಅಂಗವಾಗಿ ಮೂರನೇ ದಿನವಾದ ಸೆ.24ರಂದು ಬೆಳಿಗ್ಗೆ ಮಧ್ಯಾಹ್ನ, ರಾತ್ರಿ ಮಹಾಪೂಜೆ, ನಡೆಯಿತು. ಸಂಜೆ ಭಜನಾ ಸಂಕೀರ್ತನೆ, ರಾತ್ರಿಕಲಾ ಸೇವೆ ನಡೆಯಿತು.ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್
ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು.
ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ ಇವರಿಂದ ಭಜನಾ ಸಂಕೀರ್ತನೆ ನಡೆಯಿತು.ರಾತ್ರಿ ಶ್ರೀ ಶಾರದಾಂಬಾ ಯಕ್ಷಗಾನ ಅಧ್ಯಯನ ಕೇಂದ್ರ ಪಂಜ ಇವರಿಂದ ಯಕ್ಷಗಾನ ಪ್ರದರ್ಶನ -‘ಕದಂಬ ಕೌಶಿಕೆ’ ನಡೆಯಿತು.ದೇಗುಲದ ಪಾರ್ವತಿ ಸಭಾಭವನದಲ್ಲಿ ನಡೆದ

ಯಕ್ಷಗಾನ ಬಯಲಾಟ ನಡೆಯಿತು. ಭಾಗವತರಾಗಿ ಶ್ರೀ ಶಶಾಂಕ ಎಲಿಮಲೆ ಮತ್ತು ರಚನಾ ಚಿದ್ದಲ್, ಚೆಂಡೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ ಪಂಜ, ಮದ್ದಳೆಯಲ್ಲಿ ಹರೀಶ್ ರೈ ಇಚ್ಚಿಲಂಪಾಡಿ, ಚಕ್ರತಾಳದಲ್ಲಿ ಅಂಕುಶ್ ಎಣ್ಣೆಮಜಲು ಮತ್ತು ವಾಗೀಶ ಪಳ್ಳಿಗದ್ದೆ ಸಹಕರಿಸಿದರು.ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಅವರು ಕಲಾವಿದರನ್ನು ಸನ್ಮಾನಿಸಿದರು.
ಇಂದಿನ ಕಾರ್ಯಕ್ರಮ:
ಸೆ.25ರಂದು ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೇನ್ಯ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ಕಲಾ ಸೇವೆಯಲ್ಲಿ ಶ್ರೀ ಚಾಮುಂಡೇಶ್ವರಿ ಕುಣಿತ ಭಜನಾ ತಂಡ ಪಲ್ಲೋಡಿ, ಪಂಜ ಇವರಿಂದ’ಕುಣಿತ ಭಜನೆ’ ನಡೆಯಲಿದೆ.





