ಪಂಜ: ಸುಳ್ಯ ತಾಲೂಕಿನ ಪಂಜ ನಾಡ ಕಚೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.4.ರಂದು ನಡೆಯಿತು.
ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ ಅವರು ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದರು.
“ನೂತನ ಕಚೇರಿಯಲ್ಲಿ ಜನರಿಗೆ ಉತ್ತಮ ಸೇವೆಗಳು ದೊರಕುವಂತಾಗಲಿ ಎಂದು ಹೇಳಿದರು. ನಿರುದ್ಯೋಗ ಸಮಸ್ಯೆ ನಿವಾರಿಸಲು ಕೇಂದ್ರ ಮತ್ತು
ರಾಜ್ಯ ಸರ್ಕಾರಗಳು ವಿಶೇಷ ಸ್ವ ಉದ್ಯೋಗ ಯೋಜನೆಗೆ
ಪ್ರೋತ್ಸಾಹ ನೀಡುತ್ತಿದೆ. ಮೀನು ಸಾಕಾಣಿಕೆ ಯೋಜನೆಯಿಂದ ಉತ್ತಮ ಆದಾಯ ಗಳಿಸಲು ಅವಕಾಶವಿದೆ ಎಂದರು.
ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ತಹಶೀಲ್ದಾರ್ ಮಂಜುನಾಥ್ , ಉಪತಹಶೀಲ್ದಾರ್ ಚಂದ್ರಕಾಂತ್ ಎಂ ಆರ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀತ್ , ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನೇತ್ರಾವತಿ ಕಲ್ಲಾಜೆ, ಹಿರಿಯರಾದ ಡಾ.ರಾಮಯ್ಯ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುದರ್ಶನ ಪಟ್ಟಾಜೆ ಪ್ರಾರ್ಥಿಸಿದರು.ತಹಶೀಲ್ದಾರ್ ಮಂಜುನಾಥ್ ಸ್ವಾಗತಿಸಿದರು.ಉಪತಶೀಲ್ದಾರ್ ಚಂದ್ರಕಾಂತ್ ಎಂ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ವಂದಿಸಿದರು.
18.84 ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಣಗೊಂಡಿದೆ.