ಪಂಜ: ಲಯನ್ಸ್ ಕ್ಲಬ್ ಪಂಜ , ಲಯನ್ಸ್ ಸೇವಾಟ್ರಸ್ಟ್ ಪಂಜ ವತಿಯಿಂದ ಶ್ರೀಮತಿ ದಿ.ಅಮ್ಮಕ್ಕ ಮತ್ತು ದಿ.ಮರಿಯಣ್ಣ ಗೌಡ ಬಿಳಿಮಲೆ ಸ್ಮರಣಾರ್ಥ ನಿರ್ಮಾಣಗೊಂಡ ಲಯನ್ಸ್ ಭವನದ ಉದ್ಘಾಟನಾ ಸಮಾರಂಭ ಜೂ.1ರಂದು ನಡೆಯಿತು. ಲಯನ್ಸ್ ಜಿಲ್ಲೆ 317 ಡಿ ಇದರ ರಾಜ್ಯಪಾಲ ಡಾ. ಮೇಲ್ವಿನ್ ಡಿ’ಸೋಜ ನೂತನ ಲಯನ್ಸ್ ಭವನ ಲೋಕಾರ್ಪಣೆ ಮಾಡಿದರು. ಲಯನ್ಸ್ ಜಿಲ್ಲೆ 317 ಡಿ ಪೂರ್ವ ರಾಜ್ಯಪಾಲ
ಗೀತ ಪ್ರಕಾಶ್ ದಾನಿಗಳ ಫಲಕ ಅನಾವರಣ ಗೊಳಿಸಿದರು.
ಲಯನ್ಸ್ ಮಲ್ಟಿಪಲ್ ಕೌನ್ಸಿಲ್ನ
ನಿಕಟಪೂರ್ವಾಧ್ಯಕ್ಷ ವಸಂತ ಶೆಟ್ಟಿ ನಾಮಫಲಕ ಅನಾವರಣ ಮಾಡಿದರು.ಸ್ಥಳ ದಾನಿಗಳಾದ ಯಶೋಧ ಚಿದಾನಂದ ಬಿಳಿಮಲೆ ಅವರನ್ನು ಲಯನ್ಸ್ ಮಾಜಿ ರಾಜ್ಯಪಾಲ ಎಂ. ಬಿ. ಸದಾಶಿವ ಸನ್ಮಾನಿಸಿದರು.
ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಜಳಕದಹೊಳೆ,ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ , ಕ್ಯಾಬಿನೆಟ್ ಖಜಾಂಜಿ ಸುಧಾಕರ ಶೆಟ್ಟಿ, ಪಂಜ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ, ಪಂಜ ಲಯನ್ಸ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಮಾಧವ ಗೌಡ ಜಾಕೆ, ಕಟ್ಟಡ ರಚನಾ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವನ ನಿರ್ಮಾಣದ
ಕಾಮಗಾರಿಯ ಗುತ್ತಿಗೆದಾರ ಶಬಿರ್ ಯಂ ಯಸ್ ಬಾಳಿಲ, ಇಂಜಿನಿಯರ್ ರಾಮಣ್ಣ ನಾಯ್ಕ ಹಾಗೂ ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಕಟ್ಟಡ ರಚನಾ ಸಮಿತಿ ಅಧ್ಯಕ್ಷ ಸಂತೋಷ್ ಜಾಕೆ ಸ್ವಾಗತಿಸಿದರು.ಟ್ರಸ್ಟ್ನ ಅಧ್ಯಕ್ಷ ಮಾಧವ ಗೌಡ ಜಾಕೆ ಪ್ರಾಸ್ತಾವಿಕ ಮಾತನಾಡಿದರು.
ರಶ್ಮಿ ಪಳಂಗಾಯ, ಸುಶ್ಮಿತಾ ಜಾಕೆ, ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಆಶಯ ಗೀತೆ ಹಾಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ ಪ್ರಾರ್ಥಿಸಿದರು. ಮೋಹನ್ ಕೂಟಾಜೆ ಲಯನ್ಸ್ ಧ್ವಜ ವಂದನೆ ಮಾಡಿದರು. ಟ್ರಸ್ಟ್ನ ಕಾರ್ಯದರ್ಶಿ ಹಾಗೂ ಕ್ಲಬ್ ನ ನಿಯೋಜಿತ ಅಧ್ಯಕ್ಷ ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ನ ಕೋಶಾಧಿಕಾರಿ ತುಕಾರಾಮ್ ಏನೆಕಲ್ಲು ವಂದಿಸಿದರು.