ಸುಳ್ಯ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈ ಬಂಟ, ಕಾರಣಿಕದ ದೈವ ಕಾಚು ಕುಜುಂಬ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ತಿಯಾಗುತ್ತಿದ್ದು ಡಿ.3ರಿಂದ 5ರ ತನಕ ಪುನಃ ಪ್ರತಿಷ್ಠಾ ಕಲಶ ಕಾರ್ಯಕ್ರಮ ನಡೆಯಲಿದೆ.ಕಾಚು ಕುಜುಂಬನಿಗೆ ಪಂಬೆತ್ತಾಡಿ ಗ್ರಾಮದ ಗರಡಿ ಬೈಲು (ಮೂಲಸ್ಥಾನ )ಎಂಬಲ್ಲಿ ಬಂಟಮಲೆಯಿಂದ
ಹರಿದು ಬರುವ ನಾಗತೀರ್ಥ ಹೊಳೆಯ ಬದಿಯಲ್ಲಿ ಮೂರು ಬದಿಯಲ್ಲಿ ಹೊಳೆ ಇರುವ ಪ್ರಕೃತಿ ರಮಣೀಯ ಸ್ಥಳದಲ್ಲಿ ನೂತನ ದೈವಸ್ಥಾನ ನಿರ್ಮಿಸಲಾಗಿದೆ. ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಯವರು ಡಿಸೆಂಬರ್ 3,4,5ರಂದು ಅದ್ದೂರಿಯಾಗಿ ಪುನಃ ಪ್ರತಿಷ್ಠಾ ಕಲಶ ನಡೆಸಲು ತೀರ್ಮಾನಿಸಿದೆ.

ಕಾರ್ಯಕ್ರಮಗಳು:
ಡಿ.3ರಂದು ಪೂ.8ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಮೃತ್ಯುಂಜಯ ಹೋಮ, ಆಶ್ಲೇಷ ಬಲಿ ನಡೆಯಲಿದೆ.ಮಧ್ಯಾಹ್ನ 12ರಿಂದ ಹೋಮದ ಪೂರ್ಣಾಹುತಿ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ.
ಸಂಜೆ 5.30ರಿಂದ ದುರ್ಗಾಪೂಜೆ, ಸುದರ್ಶನ ಹೋಮ, ಅಘೋರ ಹೋಮ, ವನದುರ್ಗಾ ಹೋಮ.ರಾತ್ರಿ 8:30ರಿಂದಪ್ರಸಾದ ವಿತರಣೆ, ಅನ್ನ ಪ್ರಸಾದ, ವಿತರಣೆ
ಡಿ.4ರಂದು ಸಂಜೆ 5.30 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಾಕಾರ ಬಲಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.

ಡಿ.5 ರಂದು ಪೂ.7:30ರಿಂದ ಮಹಾಗಣಪತಿ ಹೋಮ, ಕಲಶ ಪೂಜೆ. 10:29ರಿಂದ 11:30ರ ತನಕ ನಡೆಯುವ ಮಕರ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಕಾಚುಕುಜುಂಬ ದೈವದ ಪುನಃ ಪ್ರತಿಷ್ಠಾ ಕಲಶಾಭಿಷೇಕ ತಂಬಿಲ ಸೇವೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ
ನಡೆಯಲಿದೆ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ
ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್
ತಿಳಿಸಿದ್ದಾರೆ.

ಇಲ್ಲಿನ ಐತಿಹ್ಯ ಹಾಗೂ ಪ್ರಕೃತಿಯು ಮಡಿಲಿನಲ್ಲಿ ಇರುವ ದೇಗುಲ ಮತ್ತು ದೈವಸ್ಥಾನವನ್ನು ಕಾಣುವುದೇ ಒಂದು ಪುಣ್ಯವಾಗಿದೆ. ಎಲ್ಲರ ಸಹಕಾರದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ತಿಯಾಗಿದೆ ಎಂದು ಡಾ.ದೇವಿಪ್ರಸಾದ್ ಕಾನತ್ತೂರ್ ಹೇಳುತ್ತಾರೆ.












