ಪಂಜ: ಜೇಸಿಐ ಪಂಜ ಪಂಚಶ್ರೀಯ 25ನೇ ವರ್ಷಾಚರಣೆ ‘ರಜತ ರಶ್ಮಿ’ ಪ್ರಯುಕ್ತ ಬೆಳ್ಳಿ ಹಬ್ಬದ ಶಾಶ್ವತ ಯೋಜನೆ ಕದಿರು-ನೂತನ ಗದ್ದೆ ದೇವಳಕ್ಕೆ ಸಮರ್ಪಣೆ ಕಾರ್ಯಕ್ರಮ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಉದ್ಘಾಟಿಸಿದರು. “ದೇವಳಕ್ಕೆ ಅಗತ್ಯವಾದ ಗದ್ದೆಯನ್ನು ಜೇಸಿಐ ಪಂಜ ಪಂಚಶ್ರೀಯವರು ಸಮರ್ಪಣೆ ಮಾಡಿದ್ದಾರೆ. ಮುಂದಿನ
ದಿನಗಳಲ್ಲಿ ಊರವರ ಸಹಕಾರದಿಂದ ದೇವಳಕ್ಕೆ ಬೇಕಾಗುವ ನೈವೇದ್ಯಕ್ಕಾಗಿ ಗದ್ದೆಗಳನ್ನು ನಿರ್ಮಿಸಬೇಕು ಮತ್ತು ದೇವಳಕ್ಕೆ ಬೇಕಾದ ಹಾಲು ,ತುಪ್ಪಕ್ಕೆ ದೇವಳದಲ್ಲಿಯೇ ಗೋಶಾಲೆ ನಿರ್ಮಿಸ ಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲು ಗುತ್ತು ಮಾತನಾಡಿದರು. ಜೇಸಿಐ ಪೂರ್ವ ವಲಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ ಶುಭ ಹಾರೈಸಿದರು. ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಅಧ್ಯಕ್ಷತೆ ವಹಿಸಿದ್ದರು.

ಬಳಿಕ ‘ಸರ್ವ ಋತು ತರಕಾರಿ ಬೆಳೆ’ವಿಚಾರಗೋಷ್ಠಿ ನಡೆಯಿತು. ಪ್ರಗತಿಪರ ಸರ್ವ ಋತು ಸಾವಯವ ತರಕಾರಿ ಬೆಳೆಗಾರ ಶಿವಪ್ರಸಾದ ವರ್ಮುಡಿ ಹಾಗು
‘ನಿಸರ್ಗದತ್ತ ಆಹಾರ’ ವಿಚಾರಗೋಷ್ಠಿಯಲ್ಲಿ ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಸಸ್ಯ ಶಾಸ್ತ್ರಜ್ಞರು ಹಾಗೂ ವಿಶ್ರಾಂತ ಪ್ರಾಂಶುಪಾಲೆ ರಮಾ ವೈ.ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಮತ್ತು ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಕಾರ್ಯಕ್ರಮ ಸಂಯೋಜಕ, ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ತೀರ್ಥಾನಂದ ಕೊಡೆಂಕಿರಿ, ಕಾರ್ಯಕ್ರಮ ನಿರ್ದೇಶಕ ಲೋಕೇಶ್ ಆಕ್ರಿಕಟ್ಟೆ, ಘಟಕದ ಕಾರ್ಯದರ್ಶಿ ಕೌಶಿಕ್ ಕುಳ , ಕಾರ್ಯಕ್ರಮ ಸಂಯೋಜಕ ದಯಪ್ರಸಾದ್ ಚೀಮುಳ್ಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಳಕ್ಕೆ ಗದ್ದೆಯನ್ನು ‘ತೆನೆ’ ನೀಡಿ ಹಸ್ತಾಂತರ ಮಾಡಲಾಯಿತು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತೀರ್ಥಪ್ರಸಾದ್ ಪಲ್ಲತ್ತಡ್ಕ ವೇದಿಕೆಗೆ ಆಹ್ವಾನಿಸಿದರು. ಜಯರಾಮ ಕಲ್ಲಾಜೆ ಜೇಸಿ ವಾಣಿ ನುಡಿದರು. ತೀರ್ಥಾನಂದ ಕೊಡೆಂಕಿರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗ್ಮಣಿ ಕೆದಿಲ, ಜೀವನ್ ಶೆಟ್ಟಿಗದ್ದೆ, ದಯಾನಂದ ಕೆಬ್ಬೋಡಿ ಅತಿಥಿಗಳ ಪರಿಚಯಿಸಿದರು. ಕಾರ್ಯದರ್ಶಿ ಕೌಶಿಕ್ ಕುಳ ವಂದಿಸಿದರು. ಬಳಿಕ ವಿಚಾರ ಗೋಷ್ಠಿಗಳು, ನಿಸರ್ಗದತ್ತ ಆಹಾರ ತಯಾರಿ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನಕ್ಕೆ ನಡೆಯಿತು.