ಪಂಜ: ಜೇಸಿಐ ಪಂಜ ಪಂಚಶ್ರೀ ಇದರ ಬೆಳ್ಳಿ ಹಬ್ಬ-‘ರಜತ ರಶ್ಮಿ’ ಪ್ರಯುಕ್ತ ನಡೆದ ರಜತ ಟ್ರೋಫಿ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭವು ಪಂಜ ಸರಕಾರಿ ಪದವಿ ಪೂರ್ವ ಕಾಲೇಜು ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿದಲ್ಲಿ ನಡೆಯಿತು. ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಸಭಾಧ್ಯಕ್ಷತೆ ವಹಿಸಿದ್ದರು.ಬಹುಮಾನ ವಿತರಣೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭರತ್ ಮುಂಡೋಡಿ ನೆರವೇರಿಸಿದರು. ರಾಷ್ಟ್ರೀಯ ಕ್ರೀಡಾ ತರಬೇತುದಾರ ಬಿ.ಕೆ ಮಾಧವ ಗೌಡ, ಜಿಲ್ಲಾ
ಲಯನ್ಸ್ ನಿಕಟ ಪೂರ್ವ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯರಾಮ ದೇರಪ್ಪಜ್ಜನಮನೆ ಶುಭ ಹಾರೈಸಿದರು .ಗುತ್ತಿಗಾರು ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಮಾಧವ ಎರ್ದಡ್ಕ
ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಮತ್ತು ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಕಾರ್ಯಕ್ರಮ ಸಂಯೋಜಕ, ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ತೀರ್ಥಾನಂದ ಕೊಡೆಂಕಿರಿ, ಕಾರ್ಯಕ್ರಮ ನಿರ್ದೇಶಕ ಲೋಕೇಶ್ ಆಕ್ರಿಕಟ್ಟೆ, ಘಟಕದ ಕಾರ್ಯದರ್ಶಿ ಕೌಶಿಕ್ ಕುಳ , ಕ್ರಿಕೆಟ್ ಪಂದ್ಯಾಟ ಕಾರ್ಯಕ್ರಮ ಸಂಯೋಜಕ ವಿನ್ಯಾಸ ಕೊಚ್ಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಸುದೇವ ಮೇಲ್ಪಾಡಿ ವೇದಿಕೆಗೆ ಆಹ್ವಾನಿಸಿದರು. ವಾಚಣ್ಣ ಕೆರೆಮೂಲೆ ಜೇಸಿವಾಣಿ ನುಡಿದರು.ಲೋಕೇಶ್ ಆಕ್ರಿಕಟ್ಟೆ ಸ್ವಾಗತಿಸಿದರು. ಸೋಮಶೇಖರ ನೇರಳ ವಂದಿಸಿದರು. ಸುಕುಮಾರ ಕಂದ್ರಪಾಡಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

ಫಲಿತಾಂಶ :20 ಆಹ್ವಾನ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿತ್ತು.ಕುಕ್ಕೆ ಸಿಕ್ಸರ್ ಸುಬ್ರಹ್ಮಣ್ಯ ಪ್ರಥಮ ಸ್ಥಾನ ಗಳಿಸಿ ರೂ.30000ನಗದು ಮತ್ತು ಶಾಶ್ವತ ರಜತ ಟ್ರೋಫಿ, ದ್ವಿತೀಯ ಸ್ಥಾನ ಗಳಿಸಿದ ಬೆದ್ರ ಪ್ರೆಂಡ್ಸ್ ಮಂಗಳೂರು ದ್ವಿತೀಯ ಗಳಿಸಿ ರೂ.20000 ಮತ್ತು ರಜತ ಟ್ರೋಫಿ , ಸೆಮಿ ಫೈನಲ್ ನಲ್ಲಿ ನಿರ್ಗಮಿತ ತಂಡಗಳಾದ ಯುವ ಶಕ್ತಿ ನಾವೂರು ಮತ್ತು ರಿಶೀಂಗ್ ಸ್ಟಾರ್ ಮಂಗಳೂರು ತಂಡಗಳು ರಜತ ಟ್ರೋಫಿ ಮತ್ತು ತಲಾ ರೂ.3000 ಬಹುಮಾನ ಪಡೆಯಿತು.