ಪಂಜ:ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ನಡೆಯುತ್ತಿದ್ದು ಫೆ.5 ರಂದು ಪೂರ್ವಾಹ್ನ ಶ್ರೀ ದೇವರ ದರ್ಶನ ಬಲಿ ನಡೆಯಿತು. ಸಾವಿರಾರು ಮಂದಿ ಭಕ್ತರು ದರ್ಶನ ಬಲಿ ದರ್ಶನ ಪಡೆದು
ಪ್ರಸಾದ ಸ್ವೀಕರಿಸಿದರು. ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು, ವ್ಯವಸ್ಥಾಪನಾ ಸಮಿತಿಯ ಮಾಜಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.ರಾತ್ರಿ ದೀಪೋತ್ಸವ ವೈಭವ ಮಹಾಪೂಜೆ ನಡೆಯಿತು.
ಫೆ.6 ರಂದು ಮುಂಜಾನೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಹಾಪೂಜೆ, ರಾತ್ರಿ ಶ್ರೀ ದೇವರ ಬ್ರಹ್ಮರಥೋತ್ಸವ, ಶ್ರೀ ಕಾಚುಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ, ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ ಜರುಗಲಿದೆ.