ಪಂಜ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ವರ್ಷಾವಧಿ ಜಾತ್ರೋತ್ಸವದ ಪೂರ್ವಭಾವಿ ಸಭೆ ಡಿ.21 ರಂದು ದೇವಳದ ಪಾರ್ವತಿ ಸಭಾಭವನದಲ್ಲಿ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೌರವ ಸಲಹೆಗಾರರಾಗಿರಿವ ಆನಂದ ಗೌಡ ಕಂಬಳ, ಮಹೇಶ್ ಕುಮಾರ್ ಕರಿಕ್ಕಳ, ಪರಮೇಶ್ವರ ಗೌಡ ಬಿಳಿಮಲೆ, ಹಾಗೂ
ವ್ಯವಸ್ಥಾಪನ ಸಮಿತಿಯ ಸದಸ್ಯರುಗಳಾದ ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಧರ್ಮಪಾಲ ಗೌಡ ಮರಕ್ಕಡ, ರಾಮಚಂದ್ರ ಭಟ್, ಸತ್ಯನಾರಾಯಣ ಭಟ್ ಕಾಯಂಬಾಡಿ, ಧರ್ಮಣ್ಣ ನಾಯ್ಕ ಗರಡಿ, ಮಾಯಿಲಪ್ಪ ಗೌಡ ಎಣ್ಮೂರು, ಮಾಲಿನಿ ಕುದ್ವ ಉಪಸ್ಥಿತರಿದ್ದರು ಸಭೆಯಲ್ಲಿ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷರಾದ ಪದ್ಮನಾಭ ರೈ ಆಗೋಳಿಬೈಲು ಗುತ್ತು ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರುಗಳಾದ

ಬಾಲಕೃಷ್ಣ ಗೌಡ ಕುದ್ವ, ಎನ್.ಎಸ್.ಸುವರ್ಣಿನಿ, ಗಂಗಾಧರ ಗುಂಡಡ್ಕ, ಮೋನಪ್ಪ ನಾಯ್ಕ ಸೌಧಾಮಿನಿ, ಹಾಗೂ ಪೈಂದೋಡಿ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಕುದ್ವ ಹಾಗೂ ಊರ ಭಕ್ತಾಧಿಗಳು ಸೂಕ್ತ ಸಲಹೆ ಸೂಚನೆ ನೀಡಿದರು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್ ಸ್ವಾಗತಿಸಿ. ಜಾತ್ರೋತ್ಸವದ ವಿವಿಧ ಸಮಿತಿಗಳನ್ನು ರಚಿಸಿ ವಂದನಾರ್ಪಣೆಗೈದರು
ಜ.24 ರಿಂದ ಫೆ. 9 ರ ತನಕ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ. ಜ.24 ರಂದು ಗೊನೆ ಕಡಿಯುವುದು. ಫೆ.1 ರಂದು ಧ್ವಜಾರೋಹಣ. ಫೆ.5 ರಂದು ಹಗಲು ದರ್ಶನ ಬಲಿ.ಫೆ.6 ರಂದು ರಾತ್ರಿ ರಥೋತ್ಸವ ನಡೆಯಲಿದೆ.

ಶ್ರೀ ರಕ್ತೇಶ್ವರಿ ದೈವದ ನೇಮ: ದೈವಜ್ಞರ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಈ ವರುಷದಿಂದ ಫೆ.2 ರಂದು ರಾತ್ರಿ ದೇವಳದ ಮುಂಭಾಗದಲ್ಲಿ ಇರುವ ಕಳೆದ ವರ್ಷ ನೂತನವಾಗಿ ಪ್ರತಿಷ್ಠೆ ಗೊಂಡ ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ಶ್ರೀ ರಕ್ತೇಶ್ವರಿ ದೈವದ ನೇಮ ನಡೆಯಲಿದೆ. ಫೆ.7 ರಂದು ಸಂಜೆ ಶ್ರೀ ಉಳ್ಳಾಕ್ಲು ಮತ್ತು ಶ್ರೀ ಕಾಚುಕುಜುಂಬ ದೈವಗಳ ಮೂಲಸ್ಥಾನ ಗರಡಿ ಬೈಲಿನಲ್ಲಿ ಧ್ವಜಾರೋಹಣ ನಡೆದು ಮೊದಲು ಶ್ರೀ ಉಳ್ಳಾಕ್ಲು ದೈವದ ನೇಮ ಬಳಿಕ ಶ್ರೀ ಕಾಚುಕುಜುಂಬ ದೈವದ ನೇಮ ಒಂದೇ ದಿನ ನಡೆಯಲಿದೆ.













